Sunday 2 August 2015

ಪೂರ್ಣವಿರಾಮವಿಲ್ಲದ ಕರಡು ಮಾತುಗಳು



ಎಷ್ಟೋ ಬಾರಿ ಕೆಟ್ಟ ವಿಚಾರಗಳನ್ನು ಖಡಾಖಂಡಿತವಾಗಿ ಸರಿಯೆಂದು ಸಮರ್ಥಿಸಿಕೊಳ್ಳುವುವವರನ್ನು ನೋಡಿದ್ದೇವೆ . ಫೇಸ್ ಬುಕ್ಕಿನ ಕೆಲವರ ಕಾಮೆಂಟುಗಳು ಯಾಕೂಬ್ ಮೆಮನ್ ನ ಪರವಾಗಿ ವಾಗ್ದಾಳಿ ಮಾಡುವ ಪರೋಕ್ಷ ದೇಶದ್ರೋಹಿಗಳನ್ನು ಕಂಡಾಗ ಉರಿಯುವ ಮೈ ಅದೇ ರಭಸದಲ್ಲಿ ಖಂಡ ತುಂಡ ಮಾಡಿದಂತೆ ಉತ್ತರವಿತ್ತಾಗ ಪತ್ತೆಯೇ ಇಲ್ಲದಂತೆ ಮಾಯವಾಗಿ ಹೇಡಿಗಳಂತೆ ವರ್ತಿಸುವ ನರಿಗಳ ವರ್ತನೆ . ಮೆಮನ್ ಒಬ್ಬ ಮುಗ್ಧ ನಿರಪರಾಧಿಯಂತೆ, ಅವನು ಬಾಂಬ್ ಸ್ಪೋಟಿಸಿದ್ದರೂ ಸರ್ಕಾರ ಅವನ ಮೇಲೆ ಕೈಗೊಂಡ ರೀತಿ ನೀತಿ ಸರಿಯಿಲ್ಲವಂತೆ . ಮತ್ತದರ ಹಿಂದೆ ಬಾಲ ಸೇರಿಸುವಂತೆ ಅದ್ಯಾವ ಕಾಲದ್ದೋ ಸಂಝೋತಾ ಎಕ್ಸ್ ಪ್ರೆಸ್ ಬಾಂಬ್ ಸ್ಪೋಟವಂತೆ , ಮತ್ತದೇ ಗುಜರಾತ್ ದಂಗೆ ಮಾಲೆಗಾವ್ ಹಾಗೆ ತೋಚಿದ್ದ ಎಲ್ಲವನ್ನು ಮುಂದೆ ತಂದು ಮಿತಿ ಮೀರಿದ ಬುದ್ಧಿವಂತರಂತೆ ಮಾತಿನ ಭರಕ್ಕೆ ಎಷ್ಟೇ ಉತ್ತರವಿತ್ತರೂ ಜಗ್ಗದೇ ಕೊನೆಗೆ ತಾವೇ ನೈತಿಕ ಹಾದಿಯಲ್ಲಿದ್ದೇವೆಂದೆ ಸ್ವಯಂ ಘೋಷಿಸಿಕೊಳ್ಳುವುದಲ್ಲಿ ನಿಸ್ಸೀಮರು !

ಬಹುಶಃ ಬುದ್ಧಿಜೀವಿಗಳು ಎಂದು ಇಂಥಹವರಿಗೆಯೇ ಕರೆಯುತ್ತಾರೇನೋ ? . ಒಬ್ಬ ಹೇಳಿದ ಮಾತು , ನಮ್ಮ ದೇಶದ ಜನ (ಪರೋಕ್ಷವಾಗಿ ಹಿಂದುತ್ವವಾದಿಗಳಿಗೆಯೇ ಸೂಚಿಸುತ್ತಾ) ಅಯೋಧ್ಯೆ ರಾಮ ಮಂದಿರಕ್ಕೆ ಹೋರಾಡುವುದರಿಂದ ಪಾಕಿಸ್ತಾನೀ ಭಯೋತ್ಪಾದಕರು ಇಲ್ಲಿಗೆ ಬಂದು ಬಾಂಬ್ ಹಾಕುತ್ತಾರಂತೆ !!! ಮೊದಲ ಬಾರಿ ಇಂಥಹವರನ್ನು ನೇರಾನೇರ ನೋಡಿ ನಾ ತಬ್ಬಿಬ್ಬಾಗಿ ರಾಮ ಮಂದಿರ ಒಂದು ರಾಷ್ಟ್ರೀಯ ಚಿಹ್ನೆ ದೇಶದ ಉದ್ದಗಲಕ್ಕೂ ಜನ ಅದನ್ನು ಗುರುತಿಸುವುದಿಲ್ಲವೇ ಎಂದು ತಿಳಿಹೇಳಲು ಹೋದರೂ ನನ್ನ ಮಾತನ್ನು ಕಡೆಗಣಿಸಿದ .

ತೊಂಭತ್ತೊಂಭತ್ತರ ಇಸವಿಯಲ್ಲಿ ವಿಮಾನ ಅಪಹರಣದಿಂದ ಬಿಡುಗಡೆಗೊಳಪಟ್ಟ ಮಸೂದ್ ಅಜರ್ ಕರಾಚಿಯಲ್ಲಿ ಇಳಿದೊಡೆ ಬಾಯ್ಬಿಟ್ಟ ಭಾಷಣ ವೆಂದರೆ – “ ಅಮೇರಿಕಾ ಮತ್ತು ಭಾರತ ನಾಶವಾಗುವವರೆಗೂ ನಮಗೆ ನೆಮ್ಮದಿಯಿಲ್ಲ ”. ಈಗಲೂ ಆ ಮನುಷ್ಯ ತಾನಂದುಕೊಂಡ ಕೆಲಸಕ್ಕೆ “ಅಲ್ಲಾಹ್ ಕಾ ಹುಕುಂ” ಎಂಬಂತೆ ಪ್ರಯತ್ನಿಸುತ್ತಿದ್ದಾನೆ . ಇವನೊಬ್ಬನೇ ಅಲ್ಲ, ಅದೆಷ್ಟೋ ಅವನಂಥವರಿಗೆ ಸಹಾಯ ಹಸ್ತ ನೀಡುತ್ತಲೇ ಇದ್ದಾರೆ . ಇವರ ಬಗ್ಗೆ ಖಡಾಖಂಡಿತವಾಗಿ ವಿರೋಧಿಸುವುದು ಶಿಷ್ಟಾಚಾರವಲ್ಲವಂತೆ !  ಮತ್ತು ಗಂಡಾಂತರದ ಅರಿವಿಲ್ಲದ ನಮ್ಮ ಮುಗ್ಧ ಜನ ಕಸಬ್ ನನ್ನು ಬಿರಿಯಾನಿ ತಿನ್ನಿಸಿ ಕೊಬ್ಬಿಸಿ ಮತ್ತು ಯಾಕೂಬ್ ನಂಥಹ ಪಾತಕಿಗಳಿಗೆ ಜೈಲಿನಲ್ಲಿಯೇ ಎರಡು ಮಾಸ್ಟರ್ ಡಿಗ್ರಿ ಓದಲಿಕ್ಕೆ ಬಿಡುತ್ತಾರೆ. ಏಕೆಂದು ಪ್ರಷ್ಣೆ ಮಾಡುವಂತಿಲ್ಲ . ಅದು ಮಾನವ ಹಕ್ಕಂತೆ .

ಇಲ್ಲಿಯತನಕ ಒಬ್ಬನೇ ಒಬ್ಬ ಶಾಂತಿಪ್ರಿಯನೆನಿಸಿಕೊಳ್ಳುವವ ಭಯೋತ್ಪಾದನೆಯ ವಿರುದ್ಧ ಹೊಡೆದಂತೆ ಪೋಸ್ಟ್ ಹಾಕಿದ್ದು ವಿರಳ . ಪ್ರತಿಯೊಬ್ಬನ ವರ್ತನೆಯನ್ನು ಕಂಡರೆ ಒಬ್ಬ ಛೋಟಾ ಔರಂಗಾಜೇಬನೇ ಕಂಡಿಬರುತ್ತಾನೆಯೇ ಹೊರತು ಅವನಣ್ಣ ಧಾರಾ ಶಿಕೋರನಂಥಹ ಉದಾರವಾದಿ ಕಾಣುವುದು ಬಹಳ ಕಷ್ಟ . ಅಂಥಹ ಒಬ್ಬರಿಬ್ಬರಿದ್ದರೂ ಕನಿಷ್ಟಪಕ್ಷ ತಮ್ಮವರಿಗೇ ವಿರೋಧ ಮಾಡಿ ವಾದ-ಪ್ರತಿವಾದ ಮಂಡಿಸಿ ತಮ್ಮವರನ್ನು ಸಂಸ್ಕರಣೆ ಮಾಡಿಕೊಳ್ಳುದಕ್ಕಾಗುವುದಿಲ್ಲ . ಏಕೆಂದರೆ ಅವರ ಮತದಲ್ಲಿ ಒಬ್ಬನೇ ಒಬ್ಬ ದೇವ , ಅವನನ್ನು ಬಿಟ್ಟರೆ ಮತ್ಯಾವುದನ್ನೂ , ವ್ಯಕ್ತಿಯನ್ನೂ ಮಾನ್ಯ ಮಾಡುವಂತಿಲ್ಲ . ಮತ್ತೆಲ್ಲಿ ಕೊನೆಗೊಳ್ಳುತ್ತದೆ ಜಿಹಾದೀ ಮಾನಸೀಕತೆ ? . ಅಲ್ಲಾಹನಲ್ಲದೆ ಮತ್ಯಾವುದರಲ್ಲಿಯೂ ದೈವಾಂಶವಿಲ್ಲವೆನ್ನುವ ಜನ ಯಾರನ್ನೂ ಕೊಲ್ಲಲಿಕ್ಕೆ ಹಿಂಜರಿಯುವರಲ್ಲ . ಎಲ್ಲರಲ್ಲಿ ದೇವನಿದ್ದಾನೆ ಎಂದು ಆಧ್ಯಾತ್ಮದಲ್ಲಿ ಬೆರೆತು ವಾಸ್ತವದಲ್ಲಿ ಮೈ ಮರೆತು ಹೋಗುವ ನಾವು ಎಂಥಹ ಅನಾಹುತ ಮುಂದೆ ಕಾದಿದೆಯೆಂದು ಕಡೆಗಣಿಸುವ ನಮ್ಮ ಜನ ಇಷ್ಟು ವರ್ಷಗಳ ಕಾಲ ಸುಖಾಸುಮ್ಮನೆ ತಳ್ಳಿಹಾಕಿದ್ದೇವೆ.

ಇತಿಹಾಸದ ಆ ಇಸ್ಲಾಮೀ ಬರ್ಬರತೆಯನ್ನು ಕೆದಕಿ ನೋಡಿದಷ್ಟೂ ಭಯಾನಕ .  ಮತ್ತೆ ಅದೇ ಮಾನಸಿಕತೆ ಮುಂದುವರಿಕೊಂಡು ನಡೆದುಬಂದ ಪರಿ ಮುಂದಿನ ಮತ್ತಷ್ಟು ಅನಾಹುತಗಳಿಗೆ ಮುನ್ಸೂಚನೆ . ಮತ್ತದರ ಮೇಲಿನ ಖೇದವೆಂದರೆ ನಮ್ಮ ಜನರ ಜಡ ಮಾನಸಿಕತೆ . ಮತ್ತದರ ಮೇಲೆ ಬರೆ ಎಂಬಂತೆ ತೆರೆಯಲ್ಲಿ ಮರೆ ಮಾಡುವಂಥಹ ಈ ಕುಬುದ್ಧಿಗಳ ಕುತಂತ್ರಗಳು .


ಇನ್ನು ಮುಂದೆ ಈ ಸಮಸ್ಯೆ ಎದುರಿಸಲು ಅರಿತವರು ಭೀಷಣ ಪ್ರಯತ್ನ ನಡೆಸಬೇಕಿದೆ .