Thursday 19 February 2015

ಭಗವದ್ಗೀತೆ - ನೈನಂ ದಹತಿ ಪಾವಕಃ




         ಭಗವದ್ಗೀತೆಯ ಹನ್ನೆರಡನೆಯ ಅಧ್ಯಾಯದಲ್ಲಿ ಅರ್ಜುನನು ದೇವನನ್ನು ಸಾಕಾರ ರೂಪದಲ್ಲಿಯೋ ಅಥವಾ ನಿರಾಕಾರ ರೂಪದಲ್ಲಿ ಆರಾಧಿಸಬೇಕೋ ಎಂಬ ಪ್ರಷ್ಣೆಗೆ ಕೃಷ್ಣನು ಕೊಡುವ ವಿವರವೇನೆಂದರೆ . ದೈವನ ಇಂದ್ರಿಯಾತೀತವಾದ ನಿರಾಕಾರರೂಪವನ್ನರಿಯಲು ಕಠಿಣ ಪರಿಶ್ರಮ ಪಡಬೇಕಾದ್ದರಿಂದ ಸಾಕಾರ ರೂಪದಲ್ಲಿ ಆರಾಧಿಸುವುದೇ ಉತ್ತಮ ಎಂದು ಹೇಳುತ್ತಾನೆ. ಕೆಲವೊಂದು ಪಕ್ಷ ಅದು ದುಃಸಾಧ್ಯವೆನಿಸಿದರೆ ಸಕಲ ಕರ್ಮಗಳನ್ನು ನನಗರ್ಪಿಸಿ ನಿಶ್ಚಲ ಮನಸ್ಥಿತಿಯಿಂದ ನನ್ನನ್ನು ಆರಾಧಿಸಿದರೆ ಸಾಕು. ಇದು ಸಾಧ್ಯವಾಗದೇ ಹೋದರೆ ನನಗಾಗಿ ಕೆಲಸ ಮಾಡುತ್ತಾ ಮುಂದುವರೆದರೂ ಪರಿಪೂರ್ಣಹಂತ ತಲುಪುವುದು ಸಾಧ್ಯ. ಇದೂ ಆಗದೇ ಹೋದರೆ ಕರ್ಮಫಲ ತ್ಯಾಗ ಮಾಡಿ ಆತ್ಮಸ್ಥಿತನಾಗು. ಅಥವಾ ಜ್ಞಾನಸಾಧನೆ, ಧ್ಯಾನವನ್ನಚರಿಸಿ ಮನಃಶಾಂತಿಯನ್ನು ಪಡೆ ಎಂದು ಹೇಳುತ್ತಾ “ ಅದ್ವೇಷ್ಟಾ ಸರ್ವಭೂತಾನಾಂ . . .  ” ಯಾರನ್ನೂ ದ್ವೇಷಿಸದೇ ಎಲ್ಲರನ್ನೂ ಸ್ನೇಹದಿಂದ ಕಾಣುವನೋ ಅವನೂ ನನಗೆ ಪ್ರಿಯನಾದವನು ಎಂದು ಭಕ್ತಿಯ ಪ್ರತಿಯೊಂದು ಹಂತವನ್ನೂ ವಿವರಿಸುತ್ತಾ ಅವರವರ ರುಚಿ ಮತ್ತು ಶಕ್ತ್ಯಾನುಸಾರವಾಗಿ ಭಕ್ತರಿಗೆ ಮತ್ತು ನಾಸ್ತಿಕರಿಗೂ ಮಾರ್ಗದರ್ಶನ ನೇಡುತ್ತಾನೆ. ಇದು ಎಂಥಹ ಸ್ಪಷ್ಟ ವಿವರಣೆಯೆಂದರೆ ನೆಹರು ಸಹಿತ ಭಗದ್ಗೀತೆಯು ಮನವನ ಅಧ್ಯಾತ್ಮಿಕ ತಳಹದಿಗೆ ಅವಶ್ಯಕವೆಂದು ನಿಖರ ಮಾತನ್ನು ನುಡಿದಿದ್ದರು.

        ಅನೇಕ ಪಾಶ್ಚಾತ್ಯ ವಿಜ್ಞಾನಿಗಳಿಗೆ ವಿದ್ವಾಂಸರಿಗೆ ಇದು ಅತಿ ಪ್ರಿಯವಾದ ಪುಸ್ತಕ . ಐನ್ ಸ್ಟೀನ್ , ರಾಬರ್ಟ್ ಓಪನ್ ಹೈಮರ್ , ವಾರನ್ ಹೇಸ್ಟಿಂಗ್ ಸಹಿತ ಪ್ರತಿಯೊಬ್ಬರದ್ದೂ ಗೀತೆಯ ಬಗ್ಗೆ ಮೆಚ್ಚುಗೆಯ ನುಡಿಗಳನ್ನು ನೋಡಬಹುದು. ಅನೇಕ ಪಾಶ್ಚ್ಯಾತ್ಯರು ಈ ಪುಸ್ತಕವನ್ನು ಒಂದು ತತ್ವಶಾಸ್ತ್ರ ಗ್ರಂಥದಂತೆ, ಅವರವರ ಆಸಕ್ತಿಗೆ ತಕ್ಕಂತೆ ಸ್ಪೂರ್ತಿದಾಯಕ ಗ್ರಂಥದಂತೆ ಓದಿದ್ದಾರೆ. ಸ್ಟೀವ್ ಜಾಬ್ಸ್ ನಂತೂ ಗೀತೆ ಯಿಂದಲೇ ಸ್ಪೂರ್ತಿ ಪಡೆದು ನಿಷ್ಕಾಮ ಕರ್ಮವನ್ನು ಮಾಡಿ ಇಷ್ಟು ಎತ್ತರಕ್ಕೆ ಬೆಳೆದೆ ಎಂದು ಹೇಳುವಾಗ ನಮ್ಮ ದೇಶದ ಈ ಅಡ್ಡಜೀವಿಗಳಿಗೆ ಏನಪ್ಪಾ ಇದು ಕಿರಿಕ್ ?.

        ಒಂದು ವಾಕ್ಯದಲ್ಲಿ ವರ್ಣ ವ್ಯವಸ್ಠೆಯನ್ನು ನಾನೇ ನಿರ್ಮಿಸಿದೆನೆಂದು ಹೇಳಿದ್ದನೇನೋ ನಿಜ. ಆದರೆ ಅದರಲ್ಲೇನಿದೆ ಸಮಸ್ಯೆ ?. ವರ್ಣವ್ಯವಸ್ಥೆಯೆನ್ನುವುದು ಸಮಾಜಕ್ಕೆ ಬೆನ್ನೆಲುಬಾಗಿರಲು ಬೇಕಾಗಿರುವ ಆವಶ್ಯಕ ನಾಲ್ಕು ಕಂಬಗಳು . ಪ್ಲೇಟೋನ ತತ್ವದಲ್ಲಿಯೂ ಸಮಾಜದ ಸಮತೋಲನಕ್ಕೆ ಬುದ್ಧಿವಂತರು, ಸೈನಿಕರು, ರಾಜಮನೆತನದವರು ಮತ್ತು ಕೆಲಸಗಾರರು ಇರಬೇಕೆಂದು ಹೇಳಿದ್ದಾನೆ. ಇದೊಂದು ನೈಸರ್ಗಿಕ ವ್ಯವಸ್ಥೆಯಷ್ಟೇ. ಕೃಷ್ಣನು ಈ ಮಾತನ್ನು ಹೇಳಿದ್ದರೂ ಕೊನೆಯ ಯಾವದನ್ನೂ ಬಲವಂತವಾಗಿ ಆಜ್ಞಿಸದೇ ಕೇವಲ ನಿವೇದನೆಯನ್ನು ಮಾಡುತ್ತಾನೆ. ಇಂಥಹ ಉದಾರವಾದ ಉಪದೇಶ ಜಗತ್ತಿನ ಮತ್ಯಾವ ಸಾಹಿತ್ಯದಲ್ಲಿಯೂ ದೊರಕುವುದಿಲ್ಲ.

        ಒಟ್ಟಾರೆ ಬೇಕಿರುವುದನ್ನು ಪಡೆದು ಸ್ಟೀವ್ ಜಾಬ್ಸ್ ಮೇಲೆ ಬಂದರೆ ನಮ್ಮ ಬುದ್ದುಜೀವಿಗಳಿಗೆ ಗೀತೆಯಲ್ಲಿ ಯಾವುದೋ ರಂದ್ರ ಕೊರೆದು ನಾಲ್ಕು ಜನರ ಮುಂದೆ ಏನೋ ಕ್ಯಾತೆ ಎತ್ತಿ ಪ್ರಚಾರ ಗಿಟ್ಟಿಸಿ ತಮ್ಮ ಬೇಳೆ ಬೇಯಿಸಿಕೊಳ್ಳುವ ಜಾಯಮಾನ. ಇವರ ಲೀಲೆಗಳನ್ನು ಬರೆಯುತ್ತಾ ಹೋದರೆ ಹೇಳತೀರ. ಆದ್ದರಿಂದ ವಿವೇಕಾನಂದರು ಹೇಳಿದ್ದರೇನೆಂದರೆ , ನಮ್ಮ ವಿದ್ವಾಂಸರಿಗೆ ವಾಕ್ಯದಲ್ಲಿನ ರಂದ್ರಾನ್ವೇಶಣೆ ಮಾಡುವುದು ಬಿಟ್ಟರೆ ಮತ್ತೇನು ಗೊತ್ತಿಲ್ಲ. ಪಾಶ್ಚ್ಯಾತ್ಯರಾದರೋ ಆಸಕ್ತಿಯಿಂದ ಬೇಕಾದ ವಿಷಯವನ್ನು ಗ್ರಹಿಸುತ್ತಾರೋ ಹೊರತು ವಾಕ್ಯದಲ್ಲಿನ ವ್ಯಾಕರಣ ದೋಷವನ್ನೋ ಗಮನಿಸುವುದಿಲ್ಲ. ಅದಕಾರಣವಾಗಿಯೇ ವಿವೇಕಾನಂದರಿಗೆ ಪಶ್ಚಿಮ ದೇಶಗಳಲ್ಲಿ ಪ್ರಸಿದ್ಧಿ ಹೊಂದಿದರು.

ಇಲ್ಲಿನ ಬುದ್ಧಿಜೀವಿಗಳಿಗಾದರೋ ಗೀತೆಯಲ್ಲಿ ಕೃಷ್ಣ ಹೇಳಿದಂದೆ :

ಅಜ್ಞಶ್ಚಾಶ್ರದ್ದಧಾನಶ್ಚ ಸಂಶಯಾತ್ಮಾ ವಿನಶ್ಯತಿ
ನಾಯಂ ಲೋಕೋSಸ್ತಿ ನ್ ಪರೋ ನ ಸುಖಂ ಸಂಶಯಾತ್ಮನಃ . 4:40


ಅಜ್ಞಾನಿಗಳಿಗೆ ಧರ್ಮಗ್ರಂಥಗಳಲ್ಲಿ ಅನಾವಶ್ಯ ಸಂಶಯವಿದ್ದು ಭಗವಂತನ ಕೃಪೆಯಿಲದೆ ಈ ಲೋಕವಲ್ಲದೆ ಪರ ಲೋಕಗಳಲ್ಲಿಯೂ ಉದ್ಧಾರವಿಲ್ಲ.

Monday 2 February 2015

ಮಧುರೈ ಮೀನಾಕ್ಷಿ




               ಭಯಾನಕವೆನಿಸುವ ಬೃಹತ್ ಗಾತ್ರದ ಕಂಬಗಳು. ಅದರಲ್ಲಿ ದೊಡ್ಡ ದೊಡ್ಡ ಗಾತ್ರದ ಸಿಂಹದಂತಿರುವ ರಾಕ್ಷಸನ ಕೆತ್ತನೆಗಳು. ಇಂಥಹ ಸಾಲು ಸಾಲು ಕಂಬಗಳು ದಾರಿಯ ಇಕ್ಕೆಲಗಳಲ್ಲಿ ಇರುತ್ತವೆ. ಮೊದಲಸಲ ನೋಡುವವರಿಗೆ ಇಲ್ಲಿನ ಭವ್ಯ ಕೆತ್ತನೆಗಳ ನೋಟವೇ ಒಮ್ಮೆ ದಿಗಿಲು ಹುಟ್ಟಿಸಬಹುದು. ಮೀನಾಕ್ಷಿ ಮಂದಿರಸಮೂಹಗಳು ಒಂದು ಬೃಹತ್ ಆವರಣದ ಮಧ್ಯೆಯಲ್ಲಿವೆ. ಇದಕ್ಕೆ ಉತ್ತರ, ದಕ್ಷಿಣ, ಪೂರ್ವ – ಪಶ್ಚಿಮ ಎಂಬಂತೆ ನಾಲ್ಕು ಪ್ರವೇಶದ್ವಾರಗಳು. ಒಳ ಪ್ರವೇಶಿಸುತ್ತಿದ್ದಂತೆ ಒಂದು ಚಕ್ರವ್ಯೂಹ ಪ್ರವೇಶಿಸಿದಂತೆ ಅನೇಕ ಮಾರ್ಗಗಳ ದರ್ಶನ. ಮಾರ್ಗಗಳ ಪರಿಚಯವಿಲ್ಲದೆ ಒಳ ಪ್ರವೇಶಿಸಿದರೆ ದಾರಿ ತಪ್ಪಿ ಒಳಗೊಳಗೆಯೇ ವ್ಯರ್ಥ ಸಮಯ ಕಳೆಯುವ ಸಾಧ್ಯತೆಯೇ ಹೆಚ್ಚು.

               ಹದಿನಾಲ್ಕು ಪ್ರವೇಶ ಗೋಪುರಗಳು. ಅದರಲ್ಲಿ ಅತಿ ಎತ್ತರದ್ದು ದಕ್ಷಿಣದ ಐವತ್ತೆರಡು ಮೀಟರ್ ಎತ್ತರದ್ದು. ಪ್ರತೀ ಗೋಪುರದಲ್ಲಿ ಹಂತ ಹಂತವಾಗಿ ಸ್ಥಾಪಿಸಲ್ಪಟ್ಟ ಶಿಲ್ಪಕಲೆಗಳ ರಾಶಿ. ಇಡೀ ಆವರಣದೊಳಗೆ ಒಟ್ಟು ಮೂವತ್ಮೂರು ಸಾವಿರ ಕಲಾಕೃತಿಗಳಿವೆಯೆಂದು ಅಂದಾಜು. ಶಿಲ್ಪ ಶಾಸ್ತ್ರದನುಸಾರವಾಗಿ ಈ ಮಂದಿರಗಳ ಸಮೂಹ ನಿರ್ಮಾಣ ಮಾಡಿದ್ದು ಮಧುರೈನ ಕೇಂದ್ರ ಕಮಲದಂತೆ ಮಧ್ಯೆ ಭಾಗದಲ್ಲಿದ್ದು ಸುತ್ತಲೂ ಹಂತ ಹಂತವಾಗಿ ನಗರ ನಿರ್ಮಾಣಮಾಡಲಾಗಿತ್ತು.
ಇದರ ವಿವರಣೆಯನ್ನು ಬಣ್ಣಿಸುತ್ತಾ ಹೋದರೆ ಕೈ ಸೋಲುವುದು ನಿಶ್ಚಿತ. ಸಾಮಾನ್ಯರಾದವರು ಮೂರುವರೆ ಸಾವಿರ ವರ್ಷಗಳ ಇತಿಹಾಸವನ್ನು ಹೊತ್ತಿರುವ ಈ ದೇವಾಲಯಗಳ ಮೇಲೆ ಅಭಿಮಾನವೊಂದಿಟ್ಟರಷ್ಟೇ ಸಾಕು.  
ಇಂಥಹ ಭವ್ಯ ಕಲಾಕೃತಿಗಳನ್ನು ಅಭ್ಯಸಿಸಲು ವಿದೇಶಗಳಿಂದಲೂ ಅನೇಕರು ಬರುತ್ತಾರೆ.

               ಇಂಥಹ ಭವ್ಯ ಕಟ್ಟಡಗಳು ಭಾರತದಾಚಿನ ಜಗತ್ತು ಕಣ್ ಬಿಡುವ ಮುಂಚೆಯೇ ಮೂರುವರೆ ಸಾವಿರ ವರ್ಷಗಳ ಹಿಂದಿನಿಂದಲೂ ತಲೆ ಎತ್ತಿ ನಿಂತಿದ್ದವು ಎಂದರೆ ಹೆಮ್ಮೆ ಎನಿಸುತ್ತದೆ. ಆದರೂ , ಶತಮಾನಗಳ ಕಾಲ ಯಾವ ಸಮಸ್ಯೆಯೂ ಇಲ್ಲದೇ ಶಾಂತಿಯಿಂದಿದ್ದ ಈ ದೂರದ ದಕ್ಷಿಣ ಭಾರತದ ಪ್ರದೇಶ ಕೊನೆಗೂ ಇಸ್ಲಾಮಿನ ಆಕ್ರಮಣಕ್ಕೂ ಗುರಿಯಾಗಿತ್ತು.

               1311 ಇಸವಿಯಲ್ಲಿ ಅಲ್ಲಾವುದ್ದೀನ್ ಖಿಲ್ಜಿ ತನ್ನ ಸೇನಾಪತಿ ಮಲಿಕ್ ಖಾಫರ್ ನನ್ನು ದಕ್ಷಿಣ ಭಾರತದ ದಂಡಯಾತ್ರೆಗೆ ಕಳುಹಿಸಿರುತ್ತಾನೆ. ದುರ್ದೈವವೆಂಬಂತೆ ಆಗ ಹೊಯ್ಸಳಯ ಅವನತಿಯ ಕಾಲ. ದುಸ್ಥಿತಿಯನ್ನು ಅರಿತೇ ಕಾಫರ್ ದಂಡಯಾತ್ರೆ ಬಂದಂತಿತ್ತು.

               ಕಾಫರ್ ವಾರಂಗಲ್ ನನ್ನು ವಶಪಡಿಸಿಕೊಂಡು ಹೊಯ್ಸಳರನ್ನು ಇನ್ನೂ ದಕ್ಷಿಣಕ್ಕೆ ತಳ್ಳುತ್ತಾನೆ. ವೀರ ಬಲ್ಲಾಳ (III) ನನ್ನು ಸೋಲಿಸಿ ಹಳೆಬೀಡಿನ ಹಿಂದೂ ದೇವಾಲಯಗಳನ್ನು ಲೂಟಿ ಮಾಡುತ್ತಾನೆ. ಈ ಘಟನಾವಳಿಗಳು ಪಾಂಡ್ಯರಿಗೆ ಎಚ್ಚರಿಗೆ ಗಂಟೆಯಂತೆ ಎದ್ದುನಿಲ್ಲುತ್ತಾರೆ.

               ಕಾಫರ್ ನಿಗೆ ಪಾಂಡ್ಯರ ಏರುತ್ತಿರುವ ಸೇನಾಬಲದ ಬಗ್ಗೆ ಸುದ್ದಿ ತಲುಪಿತ್ತು. ಮತ್ತು ಮಧುರೈನ ರಕ್ಷಣಾ ಕೋಟೆಯಲ್ಲಿ ಇವರಿಗಿರುವ ಅನುಕೂಲತೆಗಳು. ಆದ್ದರಿಂದ ಅಲ್ಲಾವುದ್ದೀನನೇ ಕಾಫರ್ ನಿಗೆ ಸೇನಾ ಬಲವರ್ಧನೆಗಳನ್ನು ಒದಗಿಸುತ್ತಾನೆ. ಮೀನಾಕ್ಷಿ ದೇವಾಲಯವನ್ನು ಲೂಟಿಮಾಡಿಯೇ ಬರಲೆಂದು.

               ಸುಂದರ ಪಾಂಡ್ಯನು ಹಿಂದೂ ದೇವಾಲಯಗಳ ದ್ವಂಸ ಮಾಡುತ್ತಿರುವ ಮುಸ್ಲಿಮ್ ಧಾಳಿಕೋರರ ಮೇಲೆ ಕ್ರೋಧಗೊಂಡು ಸೇನಾ ಸಮೇತನಾಗಿ ಖಾಫಿರನನ್ನು ಮಣಿಸುತ್ತೇನೆಂದು ಹೊರಡುತ್ತಾನೆ. ವೀರ ಪಾಂಡ್ಯನು ರಕ್ಷಣಾತ್ಮಕವಾಗಿ ಎದುರಿಸುವುದು ಸೂಕ್ತ , ಮೈದಾನದಲ್ಲಿ ಎದುರಿಸುವುದು ಅಪಾಯವೆಂದು ಹೇಳಿದರೂ ಕೇಳದ ಸುಂದರ ಪಾಂಡ್ಯ ಅಲ್ಲಿಂದ ತೆರಳುತ್ತಾನೆ.

               ಆದರೆ ಶತ್ರುಸೇನೆಯ ಸ್ಥಾನವನ್ನು ಸರಿಯಾಗಿ ಅರಿಯದೇ ಯಾವ ಯೋಜನೆಯಿಲ್ಲದೆಯೇ ಹೊರಟ ಸುಂದರ ಪಾಂಡ್ಯನಿಗೆ ಆಪತ್ತೇ ಕಾದಿತ್ತು. ಬೃಹತ್ ಸೇನೆಯೋಂದಿಗೆ ಅವನು ತಂಜಾವೂರಿನ ಯಾವುದೋ ಒಂದು ಹೊರವಲದ ತನಕ ಹೋದರೂ ಖಾಫರ್ ನ ಸೇನೆ ಎದುರಾಗಲಿಲ್ಲ. ಅಲ್ಲಿಯ ತನಕ ನೀರಿನ ದಾಸ್ತಾನನ್ನು ಪೂರೈಸುತ್ತಿದ್ದ ಕಾವೇರಿ ನದಿ ಬೇಸಿಗೆಗಾಲದ ಉಚ್ರಾಯ ಹಂತದಲ್ಲಿದ್ದು ಸಂಪೂರ್ಣ ಬತ್ತಿ ಹೋಗಿತ್ತು. ಆದರೂ ಆ ಬರಿದಾದ ನದೀ ತೀರದಲ್ಲಿ ಸೇನೆಯನ್ನು ಮುನ್ನಡೆಸುತ್ತಾ ಹೋದ. ಸೇನೆ ಸಾಕಷ್ಟು ದಣಿವಾಗಿತ್ತು.

               ಆಗ ಖಾಫರ್ ಸೇನೆಯ ಹಠಾತ್ತನೆ ಧಾಳಿ ! ಮೊದಲೇ ದಣಿದಿದ್ದ ಸೇನೆ ಖಾಫರ್ ನಿಗೆ ಸುಲಭದ ತುತ್ತಾಗುತ್ತದೆ. ಅನೇಕರು ಸುಖಾಸುಮ್ಮನೆ ಹತರಾದರು. ನಂತರ ಪಾಂಡ್ಯರ ಅಶ್ವದಳ ಕದನ ಮುಂದುವರೆಸುತ್ತಾರೆ. ಆದರೂ ಖಾಫಿರನ ಅಶ್ವದಳದವರು ಉತ್ತಮ ಆಯುಧಗಳು(Turcopoles) ಮತ್ತಿ ಸರಪಳಿ ಕವಚವನ್ನು (Chain mail Armours)ಧರಿಸಿದ್ದಸಲುವಾಗು ಅವರನ್ನು ಎದುರಿಸಲಾಗುವುದಿಲ್ಲ. ಪಾಂಡ್ಯನ್ನರ ಹತ್ತಿರ ಉತ್ತಮ ರಕ್ಷಾಕವಚಗಳೇ ಇರಲಿಲ್ಲ. ಇದು ನಮ್ಮ ಜನ ಆಗ ಆಯುಧಗಳನ್ನು ಮೇಲ್ದರ್ಜೆಗೆ ಗಮನ ಕೊಡದ ಪರಿಣಾಮ. ಜೊತೆಗೆ ಭಾರೀ ಭಾರದ ಕತ್ತಿಯನ್ನು ಹೊತ್ತೊಯ್ಯುತ್ತಿದ್ದರು.

               ಕೊನೆಯದಾಗಿ ಖಾಫಿರನ ಪದಾತಿದಳ ಪಾಂಡ್ಯನರನ್ನು ಓಡಿಹೋಗದಂತೆ ಎಲ್ಲಾ ಕಡೆಯಿಂದ ಮುತ್ತುವರೆದುಕೊಂಡು ಸೆರೆಹಿಡಿಯುತ್ತಾರೆ. ಸುಂದರಪಾಡ್ಯನನ್ನು ಸೆರೆಹಿಡಿದು ಮಿಕ್ಕ ಎಲ್ಲಾ ಯುದ್ಧಬಂದಿಯರ ತಲೆ ಕಡಿಸುತ್ತಾನೆ. ಗೆದ್ದ ಖಾಫಿರ ತಿರುಚಿರಾಪಳ್ಳಿ ಮತ್ತು ಶ್ರೀರಂಗಂ ನ ದೇವಾಲಯಗಳನ್ನೂ ಕೊಳ್ಳೆ ಹೊಡೆಯುತ್ತಾನೆ.
ಕೆಲವು ಅಳಿದುಳಿದ ಅಶ್ವದಳದ ಸೇನೆ ಅಲ್ಲಿಂದ ತಪ್ಪಿಸಿಕೊಂಡು ವೀರಪಾಂಡ್ಯನಿದೆ ಈ ಘೋರ ಸೋಲಿನ ಸುದ್ದಿ ಮುಟ್ಟಿಸುತ್ತಾರೆ. ಈಗ ಮಧುರೈನ ನಗರ ಕೋಟೆ ಮಾತ್ರ ರಕ್ಷಣೆ. ಮೀನಾಕ್ಷಿ ದೇವಾಲಯವನ್ನು ರಕ್ಷಿಸುವುದೊಂದೇ ಆದ್ಯ ಕರ್ತವ್ಯ. ಏನು ಮಾಡುವುದು ? ಸಾಧ್ಯವಾದಷ್ಟು ದ್ವಾರದ ರಕ್ಷಣೆ ಮಾಡುತ್ತಾ ಖಾಫಿರನನ್ನು ಸಂಧಿಗೆ ಎಳೆತರುವುದೊಂದೇ ಇರುವ ಮಾರ್ಗ.

               ಖಾಫಿರನ ಸೇನೆ ಎದುರಾಯಿತು. ಕೋಟೆಯನ್ನು ಮುತ್ತಿಗೆ ಹಾಕಲು ಶುರುಮಾಡಿದ. ಆದರೆ ಗೋಡೆಯನ್ನು ಒಡೆಯುವ ಬ್ಯಾಲಿಸ್ಟಾಗಳೋ ಟ್ರಿಬ್ಯುಚೆಟ್ ಗಳನ್ನು ತಂದಿರಲಿಲ್ಲ. ಒಂದು ಕಡಿಮೆ ದರ್ಜೆಯ ಬ್ಯಾಟರಿಂಗ್ ರಾಮ್ ಇದ್ದ ಮಾತ್ರಕ್ಕೆ ಮುತ್ತಿಗೆ  ಧೀರ್ಘಕಾಲವಾಗುತ್ತಿತ್ತು. ಅದರ ಜೊತೆಗೆ ಪಾಂಡ್ಯರ ನಿರಂತರ ಬಾಣಗಳ ಧಾಳಿ ಮತ್ತು ಅಶ್ವದಳದ ಹಠಾತ್ತನೆ ರಾತ್ರಿವೇಳೆಯ ಧಾಳಿಯಿಂದ ಅನೇಕರನ್ನು ಯಮಸದನಕ್ಕಟ್ಟಿದರು. ಖಾಫರನು ಅರ್ಧದಷ್ಟು ಸೇನೆ ಯನ್ನು ಕಳೆದುಕೊಂಡ.

               ಆದರೂ ಖಾಫರನು ಒಂದು ವಾರದ ಮುತ್ತಿಗೆಯ ನಂತರ ಗೋಡೆಯನ್ನು ಒಡೆದು ಒಳ ಪ್ರವೇಶಿಸಿದ. ಮೀನಾಕ್ಷಿ ದೇವಾಲಯವನ್ನೂ ಪ್ರವೇಶಿಸಿದ.

ಮಧುರೈನ ಒಳ ಪ್ರವೇಶಿಸಿದರೂ ಅಪಾರ ಸೇನೆಯನ್ನು ಕಳೆದುಕೊಂಡ ಖಾಫಿರ್ ಸಂಧಿ ಮಾಡಿಕೊಳ್ಳಲೇ ಬೇಕಾಯಿತು.
ಖಾಫಿರನು ಹಾಕಿದ ಷರತ್ತುಗಳು.
1. ಮೀನಾಕ್ಷಿ ದೇವಾಲಯದ ಮತ್ತು ಮಧುರೈನ ಸಮಸ್ತ ನಿಧಿಯನ್ನು (96000 ಚಿನ್ನದ ನಾಣ್ಯಗಳು) ಸಮರ್ಪಿಸತಕ್ಕದ್ದು.
2. ಮಧುರೈನ ಅರ್ಧದಷ್ಟು ಅಕ್ಕಿಯ ದಾಸ್ತಾನನ್ನು ಒಪ್ಪಿಸಬೇಕು.
3. ಪಾಂಡ್ಯ ಸೇನೆಯ ಪ್ರತೀ ಕುದುರೆ ಮತ್ತು ಆನೆಗಳನ್ನು ಕೊಡತಕ್ಕದ್ದು.
ಇದರ ಪರವಾಗಿ ಖಾಫಿರನು ಸುಂದರ ಪಾಂಡ್ಯನನ್ನು ವಾಪಾಸು ಕಳುಹಿಸಿ ಮತ್ತು ದೇವಾಲಯಕ್ಕೆ ಯಾವುದೇ ಹಾನಿಯನ್ನು ಮಾಡದಿರುವೆನೆಂದು ಮಾತುಕೊಡುತ್ತಾನೆ.
ವೀರ ಪಾಂಡ್ಯನು ಆ ಮೂರೂ ಅಂಶಗಳನ್ನು ಪಾಲಿಸಬೇಕಾಯಿತು !

               ಒಂದು ಕಡೆ ಮುಸ್ಲಿಮರ ಬರ್ಬರ ಆಕ್ರಮಣಗಳು ಮತ್ತೊಂದೆಡೆ ನಮ್ಮ ಜನರ ಅಜಾಗರೂಕತೆಗಳಿಂದ ಅದೆಷ್ಟು ಪ್ರಾಣ ಮಾನ ಹಾನಿಗಳಾದವೋ ? ಅತೀ ಪ್ರಾಚೀನ ಕಲಾಕೃತಿಗಳು ಬಹುಶಃ ತಮಿಳುನಾಡು ರಾಜ್ಯದಲ್ಲಿ ಮಾತ್ರ ಅಧಿಕವಾಗಿ ಕಾಣಸಿಗುತ್ತದೆ.

               ಈ ಪ್ರದೇಶಗಳನ್ನು ಆಳಿದ ಪ್ರತಿಯೊಬ್ಬ ಅರಸನೂ ಮಂದಿರಗಳನ್ನು ಹಂತ ಹಂತವಾಗಿ ವಿಸ್ತಾರಗೊಳಿಸಿ ಕಲೆ ಪ್ರೋತ್ಸಾಹ ಕೊಡುತ್ತಲೇ ಬಂದರು. ಸಾವಿರಾರು ವರ್ಷಗಳ ಇತಿಹಾಸಕ್ಕೆ ಸಾಕ್ಷಿಯೆಂಬಂತೆ ಈ ಕಟ್ಟಡಗಳು ನಮ್ಮ ಶ್ರದ್ಧೆಯನ್ನು ಕಾಪಾಡುತ್ತಿದ್ದಾವೆ. ಅದರೆ ವಿಗ್ರಹರಾಧಕರಲ್ಲದವರಿಗೇನು ತಿಳಿಯುತ್ತದೆ ಕಲೆಯ ಮಹತ್ವ ? ಬ್ರಿಟಿಷರಾದರೋ ಈ ದೇವಾಲಯದ ಶಿಲ್ಪಕಲೆಗಳಿಗೆ ಮನಸೋತು ಈ ಪ್ರಾಚೀನ ಕಲೆಯ ರಕ್ಷಣೆಗೆ ಶ್ರಮ ಕೊಟ್ಟಿದ್ದರು. ಇಲ್ಲಿನ ಸ್ಥಳೀಯ ಉತ್ಸವಗಳಲ್ಲೂ ಪಾಲ್ಗೊಳ್ಳುತ್ತಿದ್ದರು.