Thursday 19 February 2015

ಭಗವದ್ಗೀತೆ - ನೈನಂ ದಹತಿ ಪಾವಕಃ




         ಭಗವದ್ಗೀತೆಯ ಹನ್ನೆರಡನೆಯ ಅಧ್ಯಾಯದಲ್ಲಿ ಅರ್ಜುನನು ದೇವನನ್ನು ಸಾಕಾರ ರೂಪದಲ್ಲಿಯೋ ಅಥವಾ ನಿರಾಕಾರ ರೂಪದಲ್ಲಿ ಆರಾಧಿಸಬೇಕೋ ಎಂಬ ಪ್ರಷ್ಣೆಗೆ ಕೃಷ್ಣನು ಕೊಡುವ ವಿವರವೇನೆಂದರೆ . ದೈವನ ಇಂದ್ರಿಯಾತೀತವಾದ ನಿರಾಕಾರರೂಪವನ್ನರಿಯಲು ಕಠಿಣ ಪರಿಶ್ರಮ ಪಡಬೇಕಾದ್ದರಿಂದ ಸಾಕಾರ ರೂಪದಲ್ಲಿ ಆರಾಧಿಸುವುದೇ ಉತ್ತಮ ಎಂದು ಹೇಳುತ್ತಾನೆ. ಕೆಲವೊಂದು ಪಕ್ಷ ಅದು ದುಃಸಾಧ್ಯವೆನಿಸಿದರೆ ಸಕಲ ಕರ್ಮಗಳನ್ನು ನನಗರ್ಪಿಸಿ ನಿಶ್ಚಲ ಮನಸ್ಥಿತಿಯಿಂದ ನನ್ನನ್ನು ಆರಾಧಿಸಿದರೆ ಸಾಕು. ಇದು ಸಾಧ್ಯವಾಗದೇ ಹೋದರೆ ನನಗಾಗಿ ಕೆಲಸ ಮಾಡುತ್ತಾ ಮುಂದುವರೆದರೂ ಪರಿಪೂರ್ಣಹಂತ ತಲುಪುವುದು ಸಾಧ್ಯ. ಇದೂ ಆಗದೇ ಹೋದರೆ ಕರ್ಮಫಲ ತ್ಯಾಗ ಮಾಡಿ ಆತ್ಮಸ್ಥಿತನಾಗು. ಅಥವಾ ಜ್ಞಾನಸಾಧನೆ, ಧ್ಯಾನವನ್ನಚರಿಸಿ ಮನಃಶಾಂತಿಯನ್ನು ಪಡೆ ಎಂದು ಹೇಳುತ್ತಾ “ ಅದ್ವೇಷ್ಟಾ ಸರ್ವಭೂತಾನಾಂ . . .  ” ಯಾರನ್ನೂ ದ್ವೇಷಿಸದೇ ಎಲ್ಲರನ್ನೂ ಸ್ನೇಹದಿಂದ ಕಾಣುವನೋ ಅವನೂ ನನಗೆ ಪ್ರಿಯನಾದವನು ಎಂದು ಭಕ್ತಿಯ ಪ್ರತಿಯೊಂದು ಹಂತವನ್ನೂ ವಿವರಿಸುತ್ತಾ ಅವರವರ ರುಚಿ ಮತ್ತು ಶಕ್ತ್ಯಾನುಸಾರವಾಗಿ ಭಕ್ತರಿಗೆ ಮತ್ತು ನಾಸ್ತಿಕರಿಗೂ ಮಾರ್ಗದರ್ಶನ ನೇಡುತ್ತಾನೆ. ಇದು ಎಂಥಹ ಸ್ಪಷ್ಟ ವಿವರಣೆಯೆಂದರೆ ನೆಹರು ಸಹಿತ ಭಗದ್ಗೀತೆಯು ಮನವನ ಅಧ್ಯಾತ್ಮಿಕ ತಳಹದಿಗೆ ಅವಶ್ಯಕವೆಂದು ನಿಖರ ಮಾತನ್ನು ನುಡಿದಿದ್ದರು.

        ಅನೇಕ ಪಾಶ್ಚಾತ್ಯ ವಿಜ್ಞಾನಿಗಳಿಗೆ ವಿದ್ವಾಂಸರಿಗೆ ಇದು ಅತಿ ಪ್ರಿಯವಾದ ಪುಸ್ತಕ . ಐನ್ ಸ್ಟೀನ್ , ರಾಬರ್ಟ್ ಓಪನ್ ಹೈಮರ್ , ವಾರನ್ ಹೇಸ್ಟಿಂಗ್ ಸಹಿತ ಪ್ರತಿಯೊಬ್ಬರದ್ದೂ ಗೀತೆಯ ಬಗ್ಗೆ ಮೆಚ್ಚುಗೆಯ ನುಡಿಗಳನ್ನು ನೋಡಬಹುದು. ಅನೇಕ ಪಾಶ್ಚ್ಯಾತ್ಯರು ಈ ಪುಸ್ತಕವನ್ನು ಒಂದು ತತ್ವಶಾಸ್ತ್ರ ಗ್ರಂಥದಂತೆ, ಅವರವರ ಆಸಕ್ತಿಗೆ ತಕ್ಕಂತೆ ಸ್ಪೂರ್ತಿದಾಯಕ ಗ್ರಂಥದಂತೆ ಓದಿದ್ದಾರೆ. ಸ್ಟೀವ್ ಜಾಬ್ಸ್ ನಂತೂ ಗೀತೆ ಯಿಂದಲೇ ಸ್ಪೂರ್ತಿ ಪಡೆದು ನಿಷ್ಕಾಮ ಕರ್ಮವನ್ನು ಮಾಡಿ ಇಷ್ಟು ಎತ್ತರಕ್ಕೆ ಬೆಳೆದೆ ಎಂದು ಹೇಳುವಾಗ ನಮ್ಮ ದೇಶದ ಈ ಅಡ್ಡಜೀವಿಗಳಿಗೆ ಏನಪ್ಪಾ ಇದು ಕಿರಿಕ್ ?.

        ಒಂದು ವಾಕ್ಯದಲ್ಲಿ ವರ್ಣ ವ್ಯವಸ್ಠೆಯನ್ನು ನಾನೇ ನಿರ್ಮಿಸಿದೆನೆಂದು ಹೇಳಿದ್ದನೇನೋ ನಿಜ. ಆದರೆ ಅದರಲ್ಲೇನಿದೆ ಸಮಸ್ಯೆ ?. ವರ್ಣವ್ಯವಸ್ಥೆಯೆನ್ನುವುದು ಸಮಾಜಕ್ಕೆ ಬೆನ್ನೆಲುಬಾಗಿರಲು ಬೇಕಾಗಿರುವ ಆವಶ್ಯಕ ನಾಲ್ಕು ಕಂಬಗಳು . ಪ್ಲೇಟೋನ ತತ್ವದಲ್ಲಿಯೂ ಸಮಾಜದ ಸಮತೋಲನಕ್ಕೆ ಬುದ್ಧಿವಂತರು, ಸೈನಿಕರು, ರಾಜಮನೆತನದವರು ಮತ್ತು ಕೆಲಸಗಾರರು ಇರಬೇಕೆಂದು ಹೇಳಿದ್ದಾನೆ. ಇದೊಂದು ನೈಸರ್ಗಿಕ ವ್ಯವಸ್ಥೆಯಷ್ಟೇ. ಕೃಷ್ಣನು ಈ ಮಾತನ್ನು ಹೇಳಿದ್ದರೂ ಕೊನೆಯ ಯಾವದನ್ನೂ ಬಲವಂತವಾಗಿ ಆಜ್ಞಿಸದೇ ಕೇವಲ ನಿವೇದನೆಯನ್ನು ಮಾಡುತ್ತಾನೆ. ಇಂಥಹ ಉದಾರವಾದ ಉಪದೇಶ ಜಗತ್ತಿನ ಮತ್ಯಾವ ಸಾಹಿತ್ಯದಲ್ಲಿಯೂ ದೊರಕುವುದಿಲ್ಲ.

        ಒಟ್ಟಾರೆ ಬೇಕಿರುವುದನ್ನು ಪಡೆದು ಸ್ಟೀವ್ ಜಾಬ್ಸ್ ಮೇಲೆ ಬಂದರೆ ನಮ್ಮ ಬುದ್ದುಜೀವಿಗಳಿಗೆ ಗೀತೆಯಲ್ಲಿ ಯಾವುದೋ ರಂದ್ರ ಕೊರೆದು ನಾಲ್ಕು ಜನರ ಮುಂದೆ ಏನೋ ಕ್ಯಾತೆ ಎತ್ತಿ ಪ್ರಚಾರ ಗಿಟ್ಟಿಸಿ ತಮ್ಮ ಬೇಳೆ ಬೇಯಿಸಿಕೊಳ್ಳುವ ಜಾಯಮಾನ. ಇವರ ಲೀಲೆಗಳನ್ನು ಬರೆಯುತ್ತಾ ಹೋದರೆ ಹೇಳತೀರ. ಆದ್ದರಿಂದ ವಿವೇಕಾನಂದರು ಹೇಳಿದ್ದರೇನೆಂದರೆ , ನಮ್ಮ ವಿದ್ವಾಂಸರಿಗೆ ವಾಕ್ಯದಲ್ಲಿನ ರಂದ್ರಾನ್ವೇಶಣೆ ಮಾಡುವುದು ಬಿಟ್ಟರೆ ಮತ್ತೇನು ಗೊತ್ತಿಲ್ಲ. ಪಾಶ್ಚ್ಯಾತ್ಯರಾದರೋ ಆಸಕ್ತಿಯಿಂದ ಬೇಕಾದ ವಿಷಯವನ್ನು ಗ್ರಹಿಸುತ್ತಾರೋ ಹೊರತು ವಾಕ್ಯದಲ್ಲಿನ ವ್ಯಾಕರಣ ದೋಷವನ್ನೋ ಗಮನಿಸುವುದಿಲ್ಲ. ಅದಕಾರಣವಾಗಿಯೇ ವಿವೇಕಾನಂದರಿಗೆ ಪಶ್ಚಿಮ ದೇಶಗಳಲ್ಲಿ ಪ್ರಸಿದ್ಧಿ ಹೊಂದಿದರು.

ಇಲ್ಲಿನ ಬುದ್ಧಿಜೀವಿಗಳಿಗಾದರೋ ಗೀತೆಯಲ್ಲಿ ಕೃಷ್ಣ ಹೇಳಿದಂದೆ :

ಅಜ್ಞಶ್ಚಾಶ್ರದ್ದಧಾನಶ್ಚ ಸಂಶಯಾತ್ಮಾ ವಿನಶ್ಯತಿ
ನಾಯಂ ಲೋಕೋSಸ್ತಿ ನ್ ಪರೋ ನ ಸುಖಂ ಸಂಶಯಾತ್ಮನಃ . 4:40


ಅಜ್ಞಾನಿಗಳಿಗೆ ಧರ್ಮಗ್ರಂಥಗಳಲ್ಲಿ ಅನಾವಶ್ಯ ಸಂಶಯವಿದ್ದು ಭಗವಂತನ ಕೃಪೆಯಿಲದೆ ಈ ಲೋಕವಲ್ಲದೆ ಪರ ಲೋಕಗಳಲ್ಲಿಯೂ ಉದ್ಧಾರವಿಲ್ಲ.

No comments:

Post a Comment