Sunday 4 February 2018

ಎಚ್ಚರಿಕೆ ನಿದ್ರಿಸಿದಾಗ



To be prepared for war is one of the most effective means of preserving peace.
-George Washington

1914 ರ ಮೊದಲ ಮಹಾಯುದ್ಧ ಆರಂಭಗೊಂಡಿತ್ತು. ರಣೋತ್ಸಾಹದಿಂದ ಅಸಂಖ್ಯ ಫ್ರೆಂಚ್ ಯುವಕರು ರಣಭೂಮಿಗೆ ತೆರಳಲು ಸಜ್ಜಾಗುತ್ತಿದ್ದಾರೆ.

ಆದರೆ ಅದುಯಾವ ಹುಮ್ಮಸ್ಸಿನಿನಲ್ಲಿದ್ದಾರೆ ? ಅರ್ಧ ಶತಮಾನಗಳ ಶಾಂತಿಯಿದ್ದಿದ್ದವರು ಆ ಸಮಯದಲ್ಲಿ ಯುದ್ಧವೆಂದರೆ ಏನೆಂದು ತಿಳಿದಿದ್ದರು ? . ಶಾಲಾ ಪಠ್ಯಪುಸ್ತಕಗಳಲ್ಲಿನ ವರ್ಣರಂಜಿತ ಯುದ್ಧ ಚಿತ್ರಗಳ ಕಲ್ಪನೆ ಗಳಿಸಬಹುದು ಅಥವಾ ಸಂಗ್ರಹಾಲಯಗಳ ಚಿತ್ರಗಳದ್ದೋ. ಸುಸಜ್ಜಿತ ಸಮವಸ್ತ್ರ ಧರಿಸಿದ್ದ ಅಶ್ವಾರೋಹಿ ಪಡೆಗಳ ಠಾಕುಠೀಕಿನ ಧಾಳಿಯ ವೈಭವದ ಕಲ್ಪನೆಯು! ರಣಘರ್ಜನೆ ತುಂಬಿದ್ದ ವಿಜಯಯಾತ್ರೆಯ ದೃಶ್ಯ. ಯುದ್ಧವೆಂದರೆ ಒಂದು ರೋಮಾಂಚಕ ಸಾಹಸವೆಂದು ಭ್ರಮಿಸಿದ್ದಾರೆ. ಆದರೆ ಅವರೊಂದು ಮಾರಣಹೋಮಕ್ಕೆ ಆಹುತಿಯಾಗಲು ಹೊರಟಿದ್ದಾರೆಂದು ಅವರಿಗೆ ಗೊತ್ತಿರಲಿಲ್ಲ. ಮುಂಚೆ ಅರಿವಿದ್ದ ಆ ಯುದ್ಧದ ಚಿತ್ರಣಕ್ಕೆ ಈಗ ಸಂಪೂರ್ಣ ಬದಲಾಗಿದೆಯೆಂದು ಗೊತ್ತಿರಲಿಲ್ಲ. 
ಹೀಗೆಂದು ಜೊತೆಯಲ್ಲಿ ಹೋದವನೊಬ್ಬ ಫ್ರೆಂಚ್ ಕವಿ ಹೇಳುತ್ತಾನೆ.

ಇನ್ನು ಸೇನೆ ಹೇಗಿತ್ತು? ನೆಪೋಲಿಯನ್ ಕಾಲದಲ್ಲಿದ್ದ ಹಾಗೆಯೇ ದೊಡ್ಡ ದೊಡ್ಡ ಬಟಾಲಿಯನ್ ಸಂಖ್ಯೆಯಲ್ಲಿ ವಿಂಗಡನೆಯಾಗಿತ್ತು . ಅವರ ಸಮವಸ್ತ್ರವೂ ಕೂಡ ಆಧುನಿಕ ಸಮರಕ್ಕೆ ಸರಿಹೊಂದದು .ತಲೆಗೆ ಶಿರಸ್ತ್ರಾಣವಿಲ್ಲ ಮತ್ತು ಎದ್ದುಕಾಣುವ ಕೆಂಪು ಬಣ್ಣದ ಪೈಜಾಮ. ಸುಡು ಬಿಸಿಲಿನಲ್ಲೂ ದಪ್ಪನೆಯ ಉಣ್ಣೆಯ ಕೋಟು . ಪ್ರತಿಯೊಬ್ಬರ ಹೆಗಲ ಮೇಲೆ ಉದ್ದನೆಯ ದೊಡ್ಡ ಹ್ಯಾವರ್ ಸ್ಯಾಕ್ ಚೀಲ . ಮತ್ತು ಕೊನೆಯದಾಗಿ ಹನ್ನೊಂದು ಪೌಂಡ್ ಮಣಭಾರದ ಹಳೆಯ ಲೆಬೆಲ್ ರೈಫಲ್ ಗಳು . ಆಗಿನ ಜರ್ಮನಿಯ ಮೊಸರ್ ರೈಫಲ್ ಗಳ ಅಥವಾ ಬ್ರಿಟಿಷ್ ಎಂಫೀಲ್ಡ್ ರೈಫಲ್ ಗಳ ಹತ್ತಿರವೂ ಬಾರದು. ಹೆಚ್ಚೆಂದರೆ 1200 ಅಡಿಗಳ ಅಂತರಕ್ಕೆ ಗುರಿಯಿಡಬಹುದಷ್ಟೇ . ಅಷ್ಟಲ್ಲದೇ ಈ ಹಳತಾದ ಸೇನಾತಂತ್ರಗಳನ್ನು ಇನ್ನೂ ಅಕಾಡೆಮಿಗಳಲ್ಲಿ ಕಲಿಸುತ್ತಿದ್ದರು.

ಇದರ ಪರಿಣಾಮವಾಗಿ ಲಕ್ಷಗಟ್ಟಲೆ ಫ್ರೆಂಚ್ ಯೋಧರು ಮೊದಲ ಮಹಾಯುದ್ಧದಲ್ಲಿ ಹತರಾದರು.