Friday 17 April 2015

ಹಕ್ಕ ಬುಕ್ಕ



             ಹದಿನಾಲ್ಕನೇ ಶತಮಾನದ ಆದಿಯಲ್ಲಿ ಅಲ್ಲಾವಿದ್ದೀನ್ ಖಿಲ್ಜಿಯ ಮಲಿಕ್ ಖಾಫರ್ ನೇತೃತ್ವದ ಸೇನೆ ದೇವಗಿರಿ , ವಾರಂಗಲ್ , ಹಂಪಿ , ತಂಜಾವೂರ್ ಮತ್ತು ಮಧುರೈ ತನಕವೂ ದಂಡಯಾತ್ರೆ ನಡೆಸಿ ಕೊಲೆ ಸುಲಿಗೆ ಮತ್ತು ದೇವಸ್ತಾನಗಳ ಲೂಟಿ ಮಾಡುತ್ತಿದ್ದ. ದುರ್ದೈವವೆಂಬಂತೆ ಆಗ ಹೊಯ್ಸಳ ಸಾಮ್ರಾಜ್ಯದ ಅವನತಿಯ ಕಾಲ. ಮತ್ತು ಪಾಂಡ್ಯನ್ನರ ರಣ  ವಿಫಲತೆಯಿಂದಾಗಿ ಖಾಫಿರನಿಗೆ ಮಧುರೈತನಕವೂ ಅಡೆ ತಡೆಯಿಲ್ಲದೇ ಮುನ್ನುಗ್ಗಿ ಹಿಂದೂ ಸಾಮ್ರಾಜ್ಯಗಳನ್ನು ಆಹುತಿ ತೆಗೆದುಕೊಳ್ಳುತ್ತಿದ್ದ. ಇಡೀ ದಕ್ಷಿಣ ಭಾರತ ಈ ಭೀಕರ ಧಾಳಿಗೆ ತತ್ತರಿಸಿತು.

             ಖಾಫರನ ನಂತರ 1321 ರಲ್ಲಿ ಪುನಃ ಗಿಯಾಸುದ್ದೀನ್ ತುಘ್ಲ್ಕಖ್ ನ ಮಗ ಉಲುಘ್ ಖಾನ್ ವಾರಂಗಲ್ ಪ್ರಾಂತದ ಖಾಕಟೀಯನ್ನರನ್ನು ಸೋಲಿಸಿದ. ಆಗ ಆ ಖಾಕಟೀಯ ಸೇನೆಯಲ್ಲಿ ಸೇನಾನಾಯಕರಾಗಿದ್ದ ಬುಕ್ಕರಾಯ ಮತ್ತು ಹರಿಹರರನ್ನು ಸೆರೆಯಾಳರನ್ನಾಗಿಸಿ ದೆಹಲಿಗೆ ಕರೆದೊಯ್ದು ಸುನ್ನತ್ ಮಾಡಿಸಿದರು.
ಆದರೆ ದೇಶ/ಧರ್ಮಭಕ್ತರಾದ ಹಕ್ಕ ಬುಕ್ಕರು ದೆಹಲಿಯಿಂದ ತಪ್ಪಿಸಿಕೊಂಡು ಬರುತ್ತಾರೆ.

             ಹಕ್ಕ ಬುಕ್ಕರು ತುಂಗಭದ್ರಾ ನದಿಯ ಸಮೀಪದಲ್ಲಿ ಹಾದುಹೋಗುತ್ತಿದ್ದಾಗ ಒಂದು ನರಿಯನ್ನು ಮೊಲಗಳು ಬೆದರಿಸಿ ಓಡಿಸಿಕೊಂಡು ಹೋಗುತ್ತಿದ್ದ ದೃಶ್ಯ ನೋಡಿದರಂತೆ. ನಂತರ ಅಲ್ಲೊಬ್ಬ ಸಿಕ್ಕ ಸಂನ್ಯಾಸಿ  ಸಿಕ್ಕರಂತೆ . ಅವರಲ್ಲಿ ನಡೆದ ನರಿ ತೋಳದ ವಿಷಯ ತಿಳಿಸಿದರಂತೆ. ಅವರೇ ವಿದ್ಯಾರಣ್ಯರು. ವಿದ್ಯಾರಣ್ಯರು ಆಗ ಇವರಿಬ್ಬರಿಗೂ ಈ ಸ್ಥಳದಲ್ಲಿ ಸಾಮ್ರಾಜ್ಯದ ರಾಜಧಾನಿ ನಿರ್ಮಿಸಿದರೆ ಎಂಥಹ ಶಕ್ತಿಶಾಲಿ ಸೇನೆ ಧಾಳಿ ಮಾಡಿದರೂ ಎದುರಿಸಬಲ್ಲದು ಎಂದು ನುಡಿದು ವಿಜಯನಗರ ಎಂಬ ಸಾಮ್ರಾಜ್ಯ ಸ್ಥಾಪಿಸಿರಿ ಎಂದು ಆದೇಶಿಸಿದರು. ಹಕ್ಕ ಬುಕ್ಕರಿಗೂ ಬೃಹದಾಕರದ ದೇವಸ್ಥಾನಗಳುಳ್ಳ , ಭವ್ಯ ಅರಮನೆಗಳ ಮತ್ತು ವಿಶಾಲ ಕೋಟೆ ಕೋಟೆ ಕೊತ್ತಲಗಳುಳ್ಳ ಒಂದು ಬೃಹತ್ ಸಾಮ್ರಾಜ್ಯ ಸ್ಥಾಪಿಸಬೇಕೆಂಬ ಮಹದಾಸೆಯಿತ್ತು. ಈ ಶುಭಾರಂಭಕ್ಕೆ ವಿದ್ಯಾರಣ್ಯರು ಘಳಿಗೆಯೂ ನಿಗದಿಸಿದ್ದರಂತೆ. ಇತಿಹಾಸಕಾರರ ಪ್ರಕಾರ ಈ ದಿನ ಏಪ್ರಿಲ್ 18 ರಂದು ಸೂರ್ಯೋದಯದ ವೇಳೆಯಲ್ಲಿ ವಿದ್ಯಾರಣ್ಯರು ವಿಜಯನಗರ ಸಮ್ರಾಜ್ಯದ ಸ್ಥಾಪನೆಗೆ ಶಂಖನಾದ ಮಾಡಿದರು.

             ವಿಜಯನಗರದ ಮೊದಲ ರಾಜನಾಗಿದ್ದ ಹರಿಹರ(ಹಕ್ಕ) ಪ್ರಾರಂಭದಲ್ಲಿ ತುಂಗಭದ್ರಾ ನದಿ ಕಣಿವೆಗಳ ಮೇಲೆ ಹಿಡಿತ ಸಾಧಿಸಿ ಹಂತ ಹಂತವಾಗಿ ಕೊಂಕಣ ಮತ್ತು ಮಲಬಾರ್ ಪ್ರಾಂತಗಳನ್ನು ವಶಪಡಿಸಿಕೊಂಡ. ಅದೇ ಸಮಯದಲ್ಲಿ ಕ್ಷೀಣಿಸುತ್ತಿದ್ದ ಹೊಯ್ಸಳರ ದೊರೆ ವೀರ ಬಲ್ಲಾಳ (3) ಮಧುರೈ ಸುಲ್ತಾನನೊಡನೆ ಸೆಣೆಸಿ ಅಸುನೀಗಿದ್ದ. ಇದರಿಂದ ಸಮಸ್ತ ಹೊಯ್ಸಳ ಪ್ರಾಂತಗಳನ್ನು ವಶಕ್ಕೆ ತೆಗೆದುಕೊಂಡ. ಹಕ್ಕನು ತನ್ನ ಅವಧಿಯಲ್ಲಿ ದಕ್ಷಿಣ ಭಾರತದ ಪೂರ್ವದಿಂದ ಪಶ್ಚಿಮದವರೆಗೂ ಸಾಮ್ರಾಜ್ಯ ವಿಸ್ತರಿಸಿದ.

             ಅವನ ನಂತರ ಬುಕ್ಕರಾಯನು ದಕ್ಷಿಣ ಭಾರತದ ಅನೇಕ ಸಣ್ಣ ಸಣ್ಣ ಪ್ರಾಂತಗಳನ್ನು (ನ್ಯೂಣಿಜ್ ನ ದಾಖಲೆ ಅನುಸಾರವಾಗಿ) ತಕ್ಕೆಗೆ ತೆಗೆದುಕೊಂಡು ಒಂದುಗೂಡಿಸಿದ. ಆರ್ಕೊಟ್ ನ ಶಂಭುವರಾಯ , ಕೊಂಡವೀಡುವಿನ ರೆಡ್ಡಿಗಳನ್ನು ಮಣಿಸಿ ಪೀನುಕೊಂಡಾದ ಪ್ರಾಂತಗಳನ್ನು ವಿಜಯನಗರಕ್ಕೆ ಸೇರಿಸಿದ. ಮಧುರೈ ಸುಲ್ತಾನನನ್ನೂ ಸೋಲಿಸಿ ರಾಮೇಶ್ವರಂ ತನಕ ವಿಸ್ತರಿಸಿದ. ಗಂಗಾಬಿಕೆಯ ‘ಮಧುರಾವಿಜಯಮ್’ ನಲ್ಲಿ ಉಲ್ಲೇಖವಿರುವುದೇನೆಂದರೆ 1374ರಷ್ಟರಲ್ಲಿ ಬಹ್ಮನಿ ಸುಲ್ತಾನರಮೇಲೂ ಮೇಲುಗೈ ಸಾಧಿಸಿ ಗೋವಾ ಪ್ರಾಂತವನ್ನು ಮತ್ತು ಓಡಿಶಾ ರಾಜ್ಯಗಳನ್ನು ವಶ್ಪಡಿಸಿದ್ದಲ್ಲದೇ ಶ್ರೀಲಂಕಾದ ಜಾಫ್ನಾ ಮತ್ತು ಕೇರಳದ ಜಾಮೋರಿನರನು ಕಪ್ಪಕಾಣಿಕೆ ಕೊಡುವಷ್ಟು ಸಾಮ್ರಾಜ್ಯ ಬಲಶಾಲಿಯಾಯಿತು.

             ಹೀಗೆ ಘೋರ ಆಪತ್ತಿನ ಸಮಯದಲ್ಲಿ ಹಕ್ಕ ಬುಕ್ಕರು ಆಶಾಕಿರಣನಂತೆ ಉದಯಿಸಿ ಹಿಂದೂಧರ್ಮವನ್ನು ರಕ್ಷಿಸಿದರು. ದಕ್ಷಿಣ ಭಾರತದಲ್ಲಿ ಕಲೆ, ಸಾಹಿತ್ಯ, ಸಂಗೀತ ವೈಭವಗಳ ಉಳಿವಿಗೆ ಇವರಿಬ್ಬರೇ ಕಾರಣ.

Thursday 16 April 2015

ಇಲಾನ್ ಮಸ್ಕ್



             ಒಬ್ಬ ಮನುಷ್ಯ ತನ್ನ ನಲವತ್ತನೆಯ ವಯಸ್ಸಿನಲ್ಲಿ ಎಷ್ಟು ಸಾಧನೆ ಮಾಡಲು ಸಾಧ್ಯ ? ಹೆಚ್ಚೆಂದರೆ ಒಂದು ಕಂಪನಿ ಹುಟ್ಟುಹಾಕಿ ಅದನ್ನ ನಡೆಸುವುದು ಹೆಚ್ಚು. ಅದೂ ಯಾವುದೋ ಒಂದು ಸಣ್ಣ ಪ್ರಮಾಣದ ಐಟಿ ಕಂಪನಿಯೋ, ಅದರಲ್ಲಿ ಜಾಗತಿಕ ಸ್ಪರ್ಧೆಯನ್ನು ಎದುರಿಸಿ ಒಂದು ಮಟ್ಟಕ್ಕೆ ನಿಲ್ಲುವುದೇ ಕಷ್ಟ ಇಂದಿನ ತಂತ್ರಜ್ಞಾನ ಯುಗದಲ್ಲಿ.
ಇನ್ನು ವರ್ತಮಾನವನ್ನು ಮೀರಿ ಭವಿಷ್ಯದ ಮೇಲೆ ದೃಷ್ಟಿಯಿಟ್ಟು ತಂತ್ರಜ್ಞಾನದಲ್ಲಿ ಆವಿಷ್ಕಾರವನ್ನೂ ಮಾಡುತ್ತಾ ಹಾಗೆಯೇ ನಾಲ್ಕೈದು ಕಂಪನಿಗಳನ್ನು ಹುಟ್ಟುಹಾಕಿ ನಡೆಸಿಕೊಂಡು ಹೋಗುವುದು ಸಾಮಾನ್ಯವೇ ?

             ಬಾಲ್ಯದಿಂದಲೂ ಚುರುಕಿನ ಸ್ವಭಾವದ ಇಲಾನ್ ತನ್ನ ಹನ್ನೆರಡನೆಯ ವಯಸ್ಸಿನಲ್ಲಿಯೇ ಸ್ವತಃ ಕಂಪ್ಯೂಟರ್ ಪ್ರೋಗ್ರಾಂ ಬರೆಯುವುದನ್ನು ಕಲಿತು ಬ್ಲಾಸ್ಟೆರ್ ವಿಡಿಯೋ ಗೇಮ್ ರಚಿಸಿ ಐನೂರು ಡಾಲರಗಳಿಗೆ ಮಾರಿ ದುಡ್ಡು ಮಾಡಿದ್ದ. ಆಗಿನ್ನೂ 1988ರ ಇಸವಿ. ಗೇಮಿಂಗ್ ತಂತ್ರಜ್ಞಾನವಷ್ಟೇನು ಬೆಳೆದಿರಲಿಲ್ಲ. ಇಲಾನನಿಗೆ ತಂತ್ರಜ್ಞಾನ ಬೆಳೆಯುತ್ತುರುವ ಸಮಕಾಲದಲ್ಲೇ ಅದನ್ನು ಬೇಕಾಗುವ ರೀತಿಯಲ್ಲಿ ಬಳಸಿಕೊಳ್ಳುವ ಜಾಣತನವಿತ್ತು.

             ನಂತರ ಕ್ವೀನ್ಸ್ ವಿಶ್ವವಿದ್ಯಾಲಯದಲ್ಲಿ ಪದವಿಪೂರ್ವ ಶಿಕ್ಷಣ ಪಡೆದು ತದನಂತರ ಪೆನೆಂಸುವಿಲ ವಿಶ್ವವಿದ್ಯಾಲಯದಲ್ಲಿ ಪದವಿ ಪಡೆದು ಮತ್ತೆ ಎರಡನೆಯ ಪದವಿಗಾಗಿ ವಾರ್ಟನ್ ಸ್ಕೂಲ್ ನಲ್ಲಿ ಓದುತ್ತಾನೆ. ಕೊನೆಯದಾಗಿ ಸ್ಟಾಂನ್ಫರ್ಡ್ ನಲ್ಲಿ ಅಪ್ಲೈಡ್ ಫಿಸಿಕ್ಸ್ ನಲ್ಲಿ ಪಿ.ಎಚ್.ಡಿ ಗಾಗಿ ಅಧ್ಯಯನ ಶುರುಮಾಡಿದನಾದರೂ ಅಷ್ಟರಲ್ಲಿ ಉದ್ಯಮಿ (Entrepreneur) ಆಗಬೇಕೆಂಬ ಹೆಬ್ಬಯಕೆ ಬೆಳೆದು ಪಿ.ಎಚ್.ಡಿ ಯನ್ನು ಅಲ್ಲೇ ಬಿಡಿತ್ತಾನೆ.

             ಅದು 1995 ನ ಇಸವಿ. ಆಗ ತಾನೆ ಅಂತರ್ಜಾಲ ಬಳಕೆಯಲ್ಲಿ  ಬಂದಿತ್ತು. ಆಗಿನ್ನೂ ಅಂತರ್ಜಾಲದಲ್ಲಿ ವ್ಯವಹರಿಸಲು ಸ್ಥಳೀಯ ಉದ್ಯಮಗಳ ಸಂಪರ್ಕವಿವರಗಳಿರಲಿಲ್ಲ. ಇದನ್ನು ಮನಗಂಡು ಇಲಾನ್ ಮತ್ತು ಅವನ ತಮ್ಮ ಕಿಂಬಲ್ Zip2 ಎಂಬ ಕಂಪನಿ ಆರಂಭಿಸಿ ‘ಸಿಟಿ ಗೈಡ್ ‘ ಎಂಬ ಡಿಜಿಟಲ್ ವೃತ್ತ ಪತ್ರಿಕೆ ಯಲ್ಲಿ ಎಲ್ಲಾ ಮಾಹಿತಿಗಳು ದೊರಕುವಂತೆ ಮಾಡಿದ. ಇದು ಬಹಳ ಯಶಸ್ವಿ ಕಂಡು ಕಾಂಪ್ಯಾಕ್ Zip2 ವನ್ನು 307 ದಶಲಕ್ಷ ಡಾಲರ್ ಗಳಿಗೆ ಖರೀದಿಸಿ ಇಲಾನನಿಗೆ ಈ ಮಾರಾಟದಿಂದ 22 ದಶಲಕ್ಷ ಡಾಲರ್ ದೊರಕಿತು. ಆಗಿನ್ನೂ ಇಲಾನನಿಕೆ ಇಪ್ಪತ್ನಾಲ್ಕು ವಯಸ್ಸು !

             ಇದು ಕೇವಲ ಪ್ರಾರಂಭ. ಮಾರ್ಚ್ 1999ರಲ್ಲಿ ಇಲಾನ್ X.com ಎಂಬ ಇನ್ನೊಂದು ಆನ್ಲೈನ್ ಆರ್ಥಿಕ ಸೇವಾ ಕಂಪನಿಯನ್ನು ಪ್ರಾರಂಭಿಸಿದ. ಒಂದು ವರ್ಷದಲ್ಲಿ Confinity ಎಂಬ PayPal  ಸೇವೆಯಲ್ಲಿ ವಿಲೀನಗೊಂಡಿತು. ಕೊನೆಗೆ eBay ಕಂಪನಿ PayPal  ಅನ್ನು ಕೊಂಡುಕೊಳ್ಳುವಾಗ ಇಲಾನ್ PayPal  ನ ಶೇ 11ರಷ್ಟು ಷೇರು ಹೊಂದಿದ್ದ.

             ತದನಂತರ ಇಲಾನ್ ಕಣ್ಣು ಹಾಯಿಸಿದ್ದು ನೇರ ಅಂತರಿಕ್ಷಕ್ಕೇ ! . ಇಲ್ಲಿಯತನಕ ಗಳಿಸಿದ ಹಣದಿಂದ ಇಲಾನ್ ಮೂರನೆಯ ಕಂಪನಿ SpaceX ಎಂಬ ಅತ್ಯಾಧುನಿಕ ರಾಕೆಟ್ ಗಳನ್ನು ತಯಾರಿಸುವ ಸಂಸ್ಥೆಯನ್ನು ತೆರೆದ. ಇಲ್ಲಿಯತನಕವೂ ನಾವು ಅದೇ 60ರ ದಶಕದ ನಾಸಾ ತಂತ್ರಜ್ಞಾನವನ್ನು ಬಳಸುತ್ತಿದ್ದು, ಅದಕ್ಕೆ ಇಲಾನ್ ಕಡಿಮೆ ಖರ್ಚಿನಲ್ಲಿ ರಾಕೆಟ್ ನಿರ್ಮಿಸುವುದು ಮತ್ತು ರಾಕೆಟ್ ನ ಉಡಾವಣಾ ಸಮಯದಲ್ಲಿ ಕಳಚಿಬೀಳುವ ವಿವಿಧ ಹಂತಗಳನ್ನು ಪುನಃ ಬಳಸುವುದರ ಸಲುವಾಗಿ ಹೊಸ ವಿಧಾನಗಳನ್ನು ಕಡುಹಿಡಿಯುವುದೇ ಮೂಲ ಉದ್ದೇಶ. ಸೆಪ್ಟೆಂಬರ್ 2009 ರಲ್ಲಿ SpaceX ವಿಶ್ವದ ಮೊದಲ ಉಪಗ್ರಹವನ್ನು ಹೊತ್ತೊಯ್ದ ಖಾಸಗಿ ರಾಕೆಟ್ ಎಂಬ ಹೆಗ್ಗಳಿಕೆಯೂ ಬಂತು. ಇಷ್ಟೇ ಅಲ್ಲದೇ ಮೇ 2012ರಲ್ಲಿ SpaceX Dragon vehicle ಅಂತರಾಷ್ಟ್ರೀಯ ಬಾಹ್ಯಾಕಾಶ ಸಂಸ್ಥೆಗೆ ಸರಕನ್ನು ಸಾಗಿಸಿದ ಮೊದಲ ಆರ್ಥಿಕ ಕಂಪನಿ ಎಂದು ಇತಿಹಾಸ ಬರೆಯಿತು.

             ಇಲಾನನಿಗೆ ಮಂಗಳ ಗ್ರಹವನ್ನು ವಸಾಹತನ್ನಾಗಿಸಿ ಒಂದು ದಶಲಕ್ಷ ಜನರನ್ನು ಸಾಗಿಸಲು ಅನುಕೂಲವಾಗುವಂತೆ ತಂತ್ರಜ್ಞಾನವನ್ನು ಬೆಳೆಸಬೇಕೆಂಬ ಮೀರಿದ ಬಯಕೆಯೂ ಇದೆ.

             ಇನ್ನೂ ಎರಡು ಕಂಪನಿಗಳಾದ Tesla Motors ಮತ್ತು SolarCity ಎಂಬ ಕಂಪನಿಗಳನ್ನೂ ಜಾಗತಿಕ ತಾಪಮಾನವನ್ನು ಇಳಿಸಲೆಂದು ಪ್ರಾರಂಭಿಸಿದ್ದ. Tesla Motors ನಲ್ಲಿ ವಿದ್ಯುತ್ ಚಾಲಿತ ಸ್ಪೋರ್ಟ್ಸ್ ಕಾರುಗಳನ್ನು ತಯಾರುಮಾಡಲಾಗುತ್ತದೆ. ಭವಿಷ್ಯದಲ್ಲಿ ಪೆಟ್ರೋಲ್ ಇಂಧನಗಳ ಅಭಾವ ಮತ್ತು ಮಾಲಿನ್ಯವನ್ನು ತಡೆಯಲೆಂದು ಸೌರ ತಂತ್ರಜ್ಞಾನವನ್ನು ಇನ್ನಷ್ಟು ಉತ್ತೇಜಿಸುವುದು ಇವನ ಉದ್ದೇಶ. SolarCity ಕಂಪನಿ ಈಗ ಅಮೇರಿಕದ ಎರಡನೇ ಅತಿ ದೊಡ್ಡ ಸೌರ ವಿದ್ಯುತ್ ತಯಾರಿಕಾ ಕಂಪನಿಯೆಂದು ಹೆಸರಿದೆ.

             ಹಾಗಂಥ ಇಲಾನನ ಈ ಹಾದಿ ತುಂಬಾ ಸುಗಮವಾಗಿತ್ತೆಂದಲ್ಲ. ಬಹಳ ಏಳು ಬೀಳಿನ ದಾರಿಯನ್ನು ಸವೆದಿದ್ದ್ದಾನೆ. 2008ರಲ್ಲಿ BBC Top Gear ಶೋನಲ್ಲಿ Tesla ನ ಕಾರು 200 ಕಿ ಮೀ ಒಡಬೇಕಾಗಿದ್ದು ಕೇವಲ 88 ಕಿ ಮೀ ಗೆ ನಿಂತುಬಿಟ್ಟಿತ್ತು. ಇದರಿಂದ ಕಂಪನಿಯ ಮೇಲಿನ ವಿಶ್ವಾಸಕ್ಕೆ ಹೊಡೆತ ಬಿದ್ದಿತ್ತು. ಮತ್ತು ಅದೇ ವರ್ಷದ ಆರ್ಥಿಕ ಕುಸಿತದಲ್ಲಿ ಇಲಾನ್ ತನ್ನ ಮೂರು ಕಂಪನಿಗಳನ್ನು ಮುಚ್ಚಬೇಕಾದ ಪರಿಸ್ಥಿತಿಯೂ ಬಂದಿತ್ತು. ಮತ್ತು ಇತ್ತೀಚಿಗಷ್ಟೇ ತನ್ನ ಪ್ರಾಯೋಗಿಕ ನೇರವಾಗಿ ತೂಗಾಡುತ್ತಾ ಇಳಿಯುವ (Hovering)  Falkon ರಾಕೆಟ್ ಯಶಸ್ಸು ಕಾಣಲಿಲ್ಲ. ಆದರೂ ಎಲ್ಲಾ ಅಡೆತಡೆಗಳನ್ನು ಸಹಿಸಿ ತಮ್ಮ ಕನಸುಗಳ ಬೆನ್ನೇರಿ ಬಾನಿಗೇರುತ್ತಾ ವಿಜ್ಞಾನ/ತಂತ್ರಜ್ಞಾನಗಳಲ್ಲಿ ಉನ್ನತ ಸಾಧನೆ ಗೈಯುವ ಇಲಾನ್ ನಂಥವರು ಸ್ಪೂರ್ತಿದಾಯಕರೆನ್ನುವುದರಲ್ಲಿ ಸಂಶಯವೇ ಇಲ್ಲ.

             ಇಲಾನ್ ನಂಥೆಯೇ ಅಮೇರಿಕಾದಲ್ಲಿ ಮೊದಲಿನಿಂದಲೂ ಹೊವಾರ್ಡ್ ಹ್ಯೂಗ್ಸ್, ಫೋರ್ಡ್ , ಸ್ಟೀವ್ ಜಾಬ್ಸ್ , ಬಿಲ್ ಗೇಟ್ಸ್ ನಂತವರು ಉದ್ಯಮೆಯನ್ನು ಬೆಳೆಸಿ ದೇಶವನ್ನು ಸೂಪರ್ ಪಾವರ್ ಮಾಡಿದ್ದಾರೆ. ಇನ್ನೂ ಉದ್ಯಮೆ/ ತಂತ್ರಜ್ಞಾನಗಳಲ್ಲಿ ಮೇಲೆ ಬೆಳೆಯುತ್ತಲೇ ಇದ್ದಾರೆ.

             ಸುಮಾರು 1895ರ ಇಸವಿಯಲ್ಲಿ ವಿವೇಕಾನ6ದರು ಲಾ ಏಂಜಲೀಸ್ ನಲ್ಲಿ “Hints on Practical Spirituality “ ರ ಬಗ್ಗೆ ಉಪನ್ಯಾಸ ನೀಡುವಾಗ ಹೇಳುತ್ತಾರೇನೆಂದರೆ ಪಾಶ್ಚಾತ್ಯರು ತುಂಬಾ ಪ್ರಾಯೋಗಿಕ ಮನೋಭಾವದವರು. ಕೇವಲ ಐದು ಜನ ಒಟ್ಟಿಗೆ ಸೇರಿ ಐದು ಘಂಟೆ ಚರ್ಚೆ ಮಾಡಿದರೆ ಸಾಕು ಒಂದು ಜಾಯಿಂಟ್ ಸ್ಟಾಕ್ ಕಂಪನಿಯನ್ನು ತೆರೆಯುತ್ತಾರೆ. ಆದರೆ ನಮ್ಮ ದೇಶದಲ್ಲಿ ಐವತ್ತು ವರ್ಷಗಳಾದರೂ ಇನ್ನೂ ಮಾಡಲಿಕ್ಕಾಗಲಿಲ್ಲ. ಆಶ್ಚರ್ಯಕರವೇನೆಂದರೆ ಈ ಮಾತನ್ನು ಸ್ವಾಮೀಜಿ ಆಗಲೇ ನುಡಿದಿದ್ದರು !

             ನಮ್ಮ ದೇಶದ ಏರುತ್ತಿರುವ ಜನಸಂಖ್ಯೆಗೆ ಪ್ರತಿವರ್ಷ ಕನಿಷ್ಠ ಎರಡು ಕೋಟಿ ಉದ್ಯೋಗ ಸೃಷ್ಟಿ ಮಾಡಬೇಕಿದೆ. ಆದ್ದರಿಂದ ನಮ್ಮಲ್ಲಿ ಉದ್ದಿಮೆ ಇನ್ನೂ ಹೆಚ್ಚು ಬೆಳೆಯಬೇಕಿದೆ. ಅದಿಲ್ಲವಾದ್ದರಿಂದ ನಾವುಗಳು ವಿದೇಶೀ ಬಂಡವಾಳಕ್ಕೇ ಅವಲಂಬಿತರಾಗಬೇಕಾಗುತ್ತದೆ. ನಮ್ಮಲ್ಲನೇಕರು ಇಂಜಿನಿಯರಿಂಗ್ ಪದವಿ ನಂತರ ಯಾವುದಾದರೂ ಕಂಪನಿಯಲ್ಲು ಉದ್ಯೋಗ ಪಡೆದು ತಣ್ಣಗಿರುತ್ತೇವೆ. ಆಂಡ್ರಾಯ್ಡ್ ಫೋನ್ ಗಳನ್ನು ಖರೀದಿಸುತ್ತೇವೆ ಆದರೆ ಉತ್ಪಾದನೆ ಮಾಡಲು ಯೋಚನೆ ಮಾಡುವುದಿಲ್ಲ. ಈ ಜಡತ್ವವನ್ನು ಮೀರದೇ ಹೋದರೆ ನಮ್ಮ ಪ್ರಧಾನ ಮಂತ್ರಿಗಳಿಗೆ ಪ್ರತೀ ಪಾಶ್ಚ್ಯಾತ್ಯ ದೇಶಗಳನ್ನು ಭೇಟಿ ಮಾಡಿ ಹೂಡಿಕೆ ಮಾಡಿ ಎಂದು ಬೇಡಿಕೊಳ್ಳುವುದು ತಪ್ಪುವುದಿಲ್ಲ.

Thursday 9 April 2015

ಪ್ಲಾಸಿ ಕದನ


ಜೂನ್ 18 , 1757
          ರಾಬರ್ಟ್ ಕ್ಲೈವ್ ಕಲ್ಕತ್ತಾದಿಂದ ಎಂಭತ್ತು ಮೈಲಿ ಉತ್ತರದಲ್ಲಿರುವ ಖಾಟ್ವಾ ಎಂಬಲ್ಲಿಗೆ 800 ಆಂಗ್ಲ ಸೈನಿಕರೊಂದಿಗೆ ಮತ್ತು 2200 ಸ್ಥಳೀಯ ಭಾರತೀಯ ಸಿಪಾಯಿಗಳೊಂದಿಗೆ ಬಂದು ಬಿಡಾರ ಹೂಡಿರುತ್ತಾನೆ.
ಪಕ್ಕದ ಹಳ್ಳಿಯ ಪ್ಲಾಸಿಯಲ್ಲಿ ನವಾಬ ಸಿರಾಜುದ್ದೌಲನು 50000 ಉತ್ತಮ ತರಬೇತಿ ಹೊಂದಿದ ಶಿಸ್ತುಬದ್ಧ ಸೇನೆಯೊಂದಿಗೆ 53 ಭಾರೀ ತೋಪುಗಳೊಡನೆ ಸಜ್ಜಾಗಿರುತ್ತಾನೆ ! . ಅದರಲ್ಲಿ 15000 ಬಲದ ಒಂದು ದೊಡ್ಡ ಅಶ್ವದಳದವೂ ಇತ್ತು.
ಬ್ರಿಟಿಷರಿಗೆ ಈ ಪ್ಲಾಸಿ ಕದನ ಭಾರತದಲ್ಲಿನ ಅತ್ತಿತ್ವಕ್ಕೇ ಸವಾಲಾಗಿ ಎದುರಾಗಿತ್ತು !

          ಕ್ಲೈವ್ ತನ್ನ ಮೇಜರ್ ಕಿಲ್ಪಟ್ರಿಕ್ ಮತ್ತು ಇನ್ನು ಐದು ಸೇನಾ ನಾಯಕರ ಬೈಠಕ್ ನಲ್ಲಿ ಸದ್ಯದ ಪರಿಸ್ಥಿತಿಯಲ್ಲಿ ನವಾಬನೊಂದಿಗೆ ಸೆಣೆಸಲು ಯೋಗ್ಯವೋ ಅಥವಾ ಇನ್ನು ಕೆಲ ಸಮಯ ಕಾಯಬೇಕೋ ಎಂಬ ಪ್ರಷ್ಣೆಯನ್ನು ಮುಂದಿಟ್ಟಾಗ, ಪ್ರತಿಯೊಬ್ಬರೂ ಭಾರೀ ಸೋಲಿನ ಅಪಾಯವಿದ್ದು ಯೋಚನೆಯನ್ನೇ ಕೈಬಿಡುವಂತೆ ಸೂಚಿಸುತ್ತಾರೆ. ಮತ್ತೊಬ್ಬ ಮೇಜರ್ ಐಯರ್ ಕೂಟ್ ನವಾಬನ ಬಿಡಾರಕ್ಕೇ ಲಗ್ಗೆ ಇಟ್ಟು ಯುದ್ಧ ಮುಗಿಸಬೇಕೆಂದು ಉಪಾಯ ಕೊಡುತ್ತಾನೆ. ಆದರೂ ವಾರ್ ಕೌಂಸಿಲ್ ಯಾವ ಯೋಜನೆಗಳಿಗೂ ಬಹುಮತ ಸಿಗದೆ ಕ್ಲೈವ್ ಸಾಹೇಬರಿಗೆ ನಿರ್ಧಾರ ತೆಗೆದುಕೊಳ್ಳಲಾಗದೇ ತಳಮಳಗೊಳ್ಳುತ್ತಾನೆ.
          ಕ್ಲೈವ್ ಒಬ್ಬನೇ ಅಲ್ಲಿಯ ಒಂದು ಮಾವಿನ ತೋಪಿನಡಿ ಶತಪಥ ಹಾಕುತ್ತಾ ಯೋಚಿಸಿ , ಮತ್ತೂ ತಡಮಾಡಿದರೆ ನವಾಬನಿಗೆ ಮತ್ತೆ ಫ್ರೆಂಚರ ಸಹಾಯ ಮತ್ತಷ್ಟು ದೊರೆಯುವ ಸಾಧ್ಯತೆಯಿದ್ದು . ಹಾಗೇ ಈ ಮಾವಿನ ತೋಪು ನವಾಬನ ಸೇನೆಯಿಂದ ಕೇವಲ ಒಂದು ಮೈಲಿ ದೂರದಲ್ಲಿದ್ದು ತನ್ನಲ್ಲಿರುವ ಕೇವಲ ಏಳೇ ಏಳು ಫಿರಂಗಿಗಳಿಗೆ ಒಳ್ಳೆಯ ರಕ್ಷಣಾತ್ಮಕ ಸ್ಥಳ ಮತ್ತು ಈ ಜಾಗದಿಂದ ಫಿರಂಗಿಗಳನ್ನು ಸಮರ್ಥವಾಗಿ ಬಳಸಬಹುದು ಎಂದು ರಣ ತಂತ್ರ ಯೋಚಿಸಿದ. ಮತ್ತು ಅದೇ ದಿನ ದೇಶದ್ರೋಗಿ ಮೀರ್ ಜಾಫರ್ ನನ್ನು ಭೇಟಿಯಾಗಿ ನವಾಬ ನೇನೆಯ ಎಲ್ಲಾ ವಿವರಗಳನ್ನು ಪಡೆಯುತ್ತಾನೆ. ಅದೇನೋ ಭಂಢ ಧೈರ್ಯದ ಮೇಲೆ ಕ್ಲೈವ್ ರಣಕ್ಕೆ ಸಜ್ಜಾದ.

          ಆದರೆ ನವಾಬ ಒಬ್ಬ ಹತ್ತೊಭತ್ತು ವರ್ಷದ ಬಾಲಕ . ದುಡುಕಿನ ಸ್ವಭಾವ ಮತ್ತು ದರ್ಪದ ವ್ಯಕ್ತಿತ್ವ. ಯುದ್ಧಕ್ಕೆ ಎಲ್ಲಾ ರೀತಿಯ ಸೇನಾಬಲವಿದ್ದರು ಒಂದು ಸಣ್ಣ ತಪ್ಪಾಗಿತ್ತು. ಅದು ಮುಂಗಾರು ಮಳೆಗಾಲ. ರಣಕ್ಷೇತ್ರದಲ್ಲಿ ಮದ್ದುಗುಂಡುಗಳನ್ನು ನೀರಿನಿಂದ ರಕ್ಷಿಸಲು ಟಾರ್ಪಲೀನ್ ಗಳನ್ನು ಹೊದಿಸಬೇಕಾಗಿತ್ತು ಆದರೆ ಧಾವಂತದಲ್ಲಿ ಬಂದ ನವಾಬ ಇದರ ಮಹತ್ವವನ್ನು ಮನಗಾಣಲಿಲ್ಲ. ಆದಿನ ಜೋರಾಗಿ ಮಳೆ ಸುರಿಯಿತು. ಕ್ಲೈವ್ ನಾದರೋ ಮದ್ರಾಸ್ ನಿಂದ ಟಾರ್ಪಲೀನ್ ಗಳನ್ನು ತಂದಿದ್ದ ಮತ್ತು ಮಳೆ ಬರಿವ ಹೊತ್ತಿಗೆ ತನ್ನ ಫಿರಂಗಿಗಳನ್ನು ರಕ್ಷಿಸಿದ್ದ.

ಮಳೆಯ ನಂತರ ಯುದ್ಧ ಪ್ರಾರಂಭವಾಯಿತು. ( ಜೂನ್ 23 , 1757 )
ಸಿರಾಜ್ ನ 53 ಫಿರಂಗಿಗಳು ನೀರಿಗೆ ನೆನೆದು ಠುಸ್ ಎಂದವು !

          ಆದರೂ ಸಂಖ್ಯಾಬಲದ ಮೇಲೆ ನವಾಬನ ಸೇನೆ ಬ್ರಿಟಿಷರ ಮೇಲೆ ಮುಗಿಬಿತ್ತು. ಆಗ ಬ್ರಿಟಿಷರು ತಮ್ಮ ತೋಪುಗಳನ್ನು ತೆರೆದರು. ನವಾಬನ ಸೇನೆಯು ತೋಪಿನ ಧಾಳಿಗೆ ಚೆಲ್ಲಾಪಿಲ್ಲಿ ಯಾಗಿ ಸೇನೆಯ ನಡಿವ್ಯೂಹ ಮುರಿದು ಬಿದ್ದು ಅನೇಕ ಫೌಜದಾರರು ಸತ್ತರು. ಮೀರ್ ಮದನ್ ಸಾವಿಗೀಡಾದ.

          ಆಗ ಸಿರಾಜ್ ತನ್ನ ಮತ್ತೊಬ್ಬ 10000 ಸೇನೆಯ ಮುಖ್ಯಸ್ಥ ಮೀರ್ ಜಾಫರ್ ನಿಗೆ ಮುನ್ನುಗ್ಗಲು ಸೂಚಿಸಿದ.
ಜಾಫರ್ ಅವನ ಆದೇಶವನ್ನು ಕಡೆಗಣಿಸಿ ಬ್ರಿಟಿಷರೊಂದಿಗೆ ಪರಾರಿಯಾದ.
ಆ ದಿನ ಭಾರತದಲ್ಲಿ ಕಣ್ಮುಚ್ಚ ಬೇಕಾಗಿದ್ದ ಬ್ರಿಟಿಷ್ ಸಾಮ್ರಾಜ್ಯಕ್ಕೆ ಮರುಜೀವ ಬಂತು.


          ಮೀರ್ ಜಾಫರ್ ನೇನೋ ದ್ರೋಹ ಬಗೆದನಾದರೂ ಅದನ್ನು ಬದಿಸರಿಸಿ ಎಲ್ಲಾದರೂ ನವಾಬ ತನ್ನ ಫಿರಂಗಿಗಳನ್ನು ರಕ್ಷಿಸಿಕೊಂಡಿದ್ದರೆ ಇತಿಹಾಸವೇ ಬೇರೆಯಾಗುತ್ತಿತ್ತು.


ವಚನೇ ಕಾ ದರಿದ್ರತಾ


           ರಾತ್ರಿ ಹೊತ್ತಿನಲ್ಲಿ ಅನ್ನ ಸಾಂಬಾರು ಊಟ ಸಿಗದ ಕೋಯಮತ್ತೂರಿನಲ್ಲಿ ಏನು ತಿನ್ನಲು ಯಾವ ಹೋಟೆಲಿಗೆ ಹೋಗುವುದು ಅನ್ನುವುದೇ ದೊಡ್ಡ ಸಮಸ್ಯೆ. ಒಂದೇ ಕಳಪೆ ದರ್ಜೆಯ ಸಣ್ಣ ಹೋಟೇಲಿನಲ್ಲಿ  ಅದೇ ಮಾಮೂಲು ದೋಸೆ ಇಡ್ಲಿ ಅಥವಾ ದುಬಾರಿ ಹೊಟೇಲಿನಲ್ಲಿ ಹೆಚ್ಚು ಹಣ ಕೊಟ್ಟು ಸ್ವಲ್ಪ ಆಹಾರ ದೊರೆಯುವ ಹೋಗುವುದು. ಆದರೂ ಅಲ್ಲಿಯ ವೈವಿಧ್ಯತೆ ಅಷ್ಟಕ್ಕಷ್ಟೇ. ಬೇರೆ ದಾರಿಯಿಲ್ಲದ ದುಬಾರಿ ಹೋಟೇಲಾದ ಆರ್ಯಾಸ್ ಗೇ ಹೋದೆ. ಅಲ್ಲಿ ಜೊತೆಗೆಂದೇ ಇನ್ನಿಬ್ಬರು ಕನ್ನಡದ ಸಹೋದ್ಯೋಗಿಗಳು ಸಿಕ್ಕರು. ಹಾಗೇ ಹರಟೆ ಹೊಡೆಯುತ್ತಾ ತುಪ್ಪದ ಅನ್ನವನ್ನು ನಾನು ಮತ್ತು ದಯಾನಂದ್ ಮತ್ತು ಪ್ರಸಾದ್ ಪರೋಠವನ್ನು ತಿಂದ. ಒಂದು ತಟ್ಟೆ ಗೀ ರೈಸ್ ಗೆ 65 ರೂಪಾಯಿ. ಆದರೆ ಕೇವಲ ನೂರು ಗ್ರಾಂ, ಅದೇ ಬೆಲೆಗೆ ಒಂದೂವರೆ ಕೆ ಜಿ ಅಕ್ಕಿ ಬರುತ್ತದೆ ಎಂದು ಚಟಾಕಿ ಹಾರಿಸುತ್ತಿದೆ. ಈ ಊರಿನಲ್ಲಿ ದೋಸೆ ಅನ್ನುವ ಪದವೇ ಇಲ್ಲ. ಬದಲಾಗಿ ರೋಸ್ಟ್ ! ಕೇವಲ ಒಂದು ಮಿ ಮೀ ತೆಳ್ಳನೆಯ ದೋಸೆಯನ್ನು 80 ಶೇ ಕರಕಲು ಮಾಡಿ ಇಡೀ ತಮಿಳ್ನಾಡಿನ ಪ್ರತೀ ಹೋಟೇಲಿನಲ್ಲೂ ಒಂದೇ ರುಚಿಯ ಸಾಂಬಾರು ಮಾಡಿ ಬಡಿಸುತ್ತಾರೆ ಎಂದೂ ಊರಿನ ಉದ್ದಗಲಕ್ಕೂ ಕೊಂಕು ಮಾತಾಡುತ್ತಿದ್ದೆ. ದಯಾ ನನ್ನ  ಬೇಸತ್ತಿನ ಮಾತುಗಳಿಗೆ ಉಸಿರುಗಟ್ಟುವಹಾಗೆ ನಗುತ್ತಿದ್ದ. ನನಗೋ , ಹತ್ತಿರ ಹತ್ತಿರ ಎರಡು ವರ್ಷಗಳ ಕಾಲ ಈ ಊರಿನಲ್ಲಿದ್ದು ಇಲ್ಲಿನ ಊಟ ತಿಂಡಿಗಳಿಗೆ ರೋಸಿ ಹೋಗಿದ್ದೆ.

           ಹಾಗೆ ತಿಂದು ಮುಗಿಸಿ ಹೊರಗೆ ಸುಮ್ಮನೆ ತಂಗಾಳಿಗೆ ಮೈಯೊಡ್ಡಿ ಸ್ವಲ್ಪ ಹೊತ್ತು ಸೆಕೆ ಯಾರಲೆಂದು ಹರಟೆ ಹೊಡೆಯುತ್ತಿದ್ದೆವು. ಪ್ರಸಾದನು ನನ್ನ ತೆಳುವಾದ ಮೈಕಟ್ಟನ್ನು ಕಂಡು ನಾನು ಪ್ರತೀ ದಿನ ವ್ಯಾಯಾಮ ಮಾಡುತ್ತೇನೋ ಎಂಬಂತೆ ವಿಚಾರಿಸಿದ. “ ಯೋಗ/ ಸೂರ್ಯನಮಸ್ಕಾರ ಏನಾದ್ರೂ ಮಾಡ್ತೀಯೇನೋ ? ”. ನಾನು “ ಹಾಂ, ಸ್ವಲ್ಪ ಸೋರ್ಯನಮಸ್ಕಾರ ಮಾಡ್ತೀನಿ ಅಷ್ಟೇ “ ಅಂದೆ. ಪ್ರಸಾದನು ಅದು ಹೇಗೆ ಮಾಡುವುದು ಎಂದು ಕೇಳಿತ್ತಾ ಹೇಗ್ ಹೇಗೋ ಕೈ ಕಾಲೆತ್ತಿ ಹಾಗಾ ಹೀಗಾ ಅಂತ ತಪ್ಪು ತಪ್ಪಾಗಿ ರಸ್ತೆ ಮಧ್ಯ ಅವತಾರ ಶುರು ಮಾಡ್ದ. ಹಾಗಲ್ವೋ ಮರಾಯ ತಿಳ್ಕೋಬೇಕಾದ್ರೆ ಆಮೇಲೆ ಹೇಳ್ಕೊಡ್ತೀನಿ ಇಲ್ಲಿ ರಸ್ತೆ ಮಧ್ಯ ಶೋ ಏತಕ್ಕೆ ಅಂತ ತಡೆದೆ. ಆಗ ದಯಾ ಎಲ್ಲಿ ಕಲಿತ್ಯೋ ಈ ಥರದ ವರಸೆಗಳನ್ನ ಅಂದಾಗ, ಪ್ರಸಾದ ಸ್ಕೌಟೋ ಶಾಲೆನೋ ಎಲ್ಲೋ ಅಂತ ಏನೋ ತಡವರಿಸಿದ.
” ಶಾಲೇನಾ ?? !! ” , “ ಯಾವ ಶಾಲೆಯಲ್ಲಿ ಕಲಿಸುತ್ತಾರೋ ? ”, “ ಹಾಗೆಲ್ಲಾ ಶಾಲೆಯಲ್ಲಿ ಸೂರ್ಯನಮಸ್ಕಾರ ಹೇಳ್ಕೊಟ್ರೆ ಕೋಮುವಾದಿ ಶಾಲೆ ಎಂದು ಸಿದ್ರಾಮಯ್ಯ ಬಡ್ಕೋತಾನೆ. ( ಆಗ ಶುರುವಾಯ್ತು ಮಾಮೂಲಿ ರಾಜಕೀಯ )

           “ ಅದೇನೋ ಶಾದಿ ಭಾಗ್ಯ ಎಂದು ಸಾಬರಿಗೆ 35000 ರೂ ಮಲ್ಕಳಕ್ಕೆ ಹಾಸಿಗೆನೂ ಕೊಡ್ತವ್ನಂತಲ್ಲಾ ! “ ಅಯ್ಯೋ ರಾಮ. “ ಮೊದಲೇ ದೇಶದ ಯಾವ ಮೂಲೆಗೆ ಹೋದ್ರೂ ಈ ಸಾಬ್ರ ಲೌಡ್ ಸ್ಪೀಕರ್ ಶಬ್ದ ಕೇಳ್ದೇ ಇರೋ ಜಾಗಾನೇ ಇಲ್ಲ , ಇನ್ನು ಸಿದ್ರಾಮಯ್ಯ ಮತ್ತೆ ಹಾಸ್ಗೆ ಕೊಟ್ ಮಲ್ಗಿಸಿ ಅವರ ಸಂಖ್ಯೆ ಹೆಗ್ಣಗಳ ಥರ ಏರುಸ್ತಾನಲ್ಲಾ. “ ಎಂದು ಏರಿಸ್ದೆ.
ದಯಾ ಆಗ ಸಿದ್ರಾಮಯ್ಯ ಚಕ್ರವರ್ತಿಗೆ ಬೈದ ಪ್ರಸಂಗ ಸಂಭಾಷಣೆ ಸಮೇತ ವಿವರಿಸಿದ. ಇನ್ನೂ ಮೂರು ವರ್ಷ ಈ ಮನುಶ್ಯನ ತಡ್ಕೋಬೇಕಲ್ಲಾ ಅಂತ ರಗಳೆ ಆಯ್ತು.

           ಆಗ ಪ್ರಸಾದ ಎಲ್ಲವನ್ನು ಒಪ್ಪಿಕೊಂಡನಾದ್ರೂ ಹೋಗ್ಲಿ ಬಿಡ್ರೋ ತಲೆ ಕೆಡಿಸ್ಕೋಬೇಡ್ರಿ , ನೀವ್ ಅರಾಮಾಗಿ ಇರ್ರಿ ಅಂತ ಕುಚೋದ್ಯ ಮಾಡಿ ಅಂತ್ಯ ಹಾಡಕ್ ಹೋದ. ಆಗ ನಾನು “ ಇರ್ಲಿ ಬಿಡಣ್ಣ ತಲೆ ಹರಟೆ ಮಾತಾಡಕ್ ಏನಂತೆ , ನಮ್ ಆಫೀಸ್ ಟೀಮ್ ನಲ್ಲೊಬ್ಬ ಸಾಬ ಚುನಾವಣೆಗು ಮುನ್ನ ಮೋದಿನ ಕೊಲೆ ಮಾಡಬೇಕು ಅಂತ ಸಲೀಸಾಗಿ ಸಾಲ್ಕು ಜನರ ಮುಂದೆ ಬೊಬ್ಬೆ ಹೊಡೆಯುವಷ್ಟು ಧಿಮಾಕು ತೋರಿಸುತ್ತಿದ್ದ ! , ಇನ್ನು ನಮ್ಮ ಈ ಸಣ್ಣ ಪುಟ್ಟ ಮಾತು ಚಟಾಕಿಗಳು ಯಾವ ಲೆಕ್ಕಾರೀ “ .


ಸರೀ ಮತ್ತೆ, ನಾಳೆ ಮತ್ತೆ ಸಿಗೋಣ ಅಂತೆ ನಮ್ಮ ನಮ್ಮ ಕೊಣೆಯ ದಾರಿ ಹಿಡಿದೆವು. ಘಂಟೆ ಹತ್ತಾಯ್ತು ಹೊರಡೋಣ.

Sunday 5 April 2015

ದಕ್ಷಿಣ ಕೈಲಾಸ – ವೆಳ್ಳೇನಗಿರಿ: ಭಾಗ 2



ಮುಂಜಾನೆ ನಾಲ್ಕೂವರೆ ಆಗುತ್ತಿದ್ದಂತೆ ಮತ್ತೆ ಹೊರಡಬೇಕೆಂದು ಎದ್ದೆವು. ತಟಸ್ಥವಾಗಿ ಮಲಗಿದ್ದರಿಂದ ಕೊರೆಯುವ ಚಳಿಯ ಅನುಭವವಾಯಿತು. ಮೊದಲೇ ಬೇಸಿಗೆಗಾಲದ ಕಾರಣ ಚಳಿಯನ್ನು ಮರೆತಿದ್ದರಿಂದ ಈ ಮುಂಜಾನೆಯ ಚಳಿ ಏನೋ ಒಂದು ಖುಷಿ ನೀಡುತ್ತಿತ್ತು.
          ಆಕಾಶವನ್ನು ಚಪ್ಪರದಂತೆ ಮರೆಮಾಚಿದ್ದ ಮಂಜಿನ ಹೊದಿಕೆ ಮತ್ತು ಮೋಡಗಳು ಸೂರ್ಯೋದಯದ ಸೂಚನೆಯಂತೆ ಬೆಳ್ಳನೆ ಹೊಳೆಯಲಾರಂಭಿಸಿದವು. ಸೌರರಶ್ಮಿಗೆ ಮಂಜಿನ ಹೊದಿಕೆಯು ಕರಗಲಾರಂಭಿಸಿ ಭೂದೇವಿಯನ್ನು ಇರುಳ ನಿದ್ರೆಯಿಂದ ಎಬ್ಬಿಸುವಂತೆ ಪ್ರಭಾಕರನು ಮಂಜಿನ ಹಿನ್ನೆಲೆಯಲ್ಲಿ ತಣ್ಣನೆ ಪ್ರಕಾಶಿಸುತ್ತಿದ್ದ. ನಾವೂ ಸಹಿತ ಸೂರ್ಯದೇವನ ಕರೆಗೆದ್ದು ಪರ್ವತಾವರೋಹಣಕ್ಕೆ ಸಜ್ಜಾಗಿ ಇಳಿಯಲಾರಂಭಿಸಿದೆವು.
          ಇಳಿಯುತ್ತಿದ್ದಂತೆ ಮತ್ತೆ ಕಾಲಿನ ದಣಿವು ಅರಿವಿಗೆ ಬಂದವು. ಮೊಣಕಾಲಿ ಸಾಕಷ್ಟು ವ್ಯಾಯಾಮವಾಗಿದ್ದರಿಂದ ಧೃಢವಾಗಿ ಹೆಜ್ಜೆ ಇಡುವುದು ಕಷ್ಟವಾಗುತ್ತಿತ್ತು. ಹೆಜ್ಜೆ ಹೆಜ್ಜೆಗೂ ಮುಗ್ಗರಿಸಿ ಬೀಳುವ ಸಂಭವನೆ ಇದ್ದರಿಂದ ಅತ್ಯಂತ ಜಾಗರೂಕತೆಯಿಂದ ಊರುಗೋಲಿನ ಆಧಾರ ಮೇಲೆಯೇ ನಡೆಯಬೇಕು. ಏಳನೆಯ ಬೆಟ್ಟದಲ್ಲಿ ಅತೀ ಇಳಿಜಾರು, ಇಲ್ಲಿನ ಓರೇಕೋರೆ ಕಾಲುಹಾದಿಗಳನ್ನಿಳಿದು ಆರನೆಯ ಬೆಟ್ಟದ ತಪ್ಪಲಿನಲ್ಲಿನ ಹುಲ್ಲುಗಾವಲಿನ ಬಯಲಿನ ಹಾದಿಗೆ ಬಂದೆವು.
ಆಗ ಮುಂಜಾನೆ ಸಾಕಷ್ಟು ಸರಿದು ಸುತ್ತಮುತ್ತಲೂ ಪಕ್ಷಿಗಳ ಕಲರವ ಲಹರಿಸುತ್ತಿದ್ದವು. ಇನ್ನೂ ಸ್ವಲ್ಪ ಮಂಜಿನ ಹಾಸಿಗೆ ಇದ್ದೂ ತಣ್ಣನೆಯ ವಾತಾವರಣ ಮತ್ತು ಶುದ್ಧ ಗಾಳಿಯಿಂದ ದೇಹಕ್ಕೆ ದಣಿವೇ ಅರಿವಿಗೆ ಬಾರದು. ದಾರಿಬದಿಯ ಪೊದೆಗಳಲ್ಲಿ ಪುರ್ರನೆ ಹಾರುತ್ತಾ ಚಿಕ್ಕ ಪುಟ್ಟ ಪಕ್ಷಿಗಳು ಆಗಲೇ ಚಟುವಟಿಕೆ ಆರಂಭಿಸಿದ್ದವು. ಹಾಗೇ ಇಳಿಯುತ್ತಾ ಆರನೆಯ ಬೆಟ್ಟದ ಪ್ರಾರಂಭದ ಕೊಳಕ್ಕೆ ಬಂದೆವು. ಅಲ್ಲಿನ ಬಂಡೆಗಳ ಮೇಲೆ ಸ್ವಲ್ಪ ಕುಳಿತು ಅಗಾಧ ಪ್ರಕೃತಿಯ ದಿವ್ಯ ಸ್ಪರ್ಷವನ್ನು ಆಸ್ವಾದಿಸಿಸುತ್ತಾ ಮತ್ತೆ ಮುಂದುವತೆಯಿತು ಪಯಣ.
          ಹಾಗೆಯೇ ಕಡಿದಾದ ಕಲ್ಲಿನ ಮೆಟ್ಟಿಲಿನ ಹಾದಿಯಲ್ಲಿ ಇಳಿಯುತ್ತಾ ಮತಗಳ ಮೇಲೆ ವಾನರರ ಗುಂಪು ದಾರಿಹೋಕರ ವಸ್ತುಗಳನ್ನು ಕದಿಯಲು ಸಜ್ಜಾಗಿ ನಿಂತಿದ್ದವು. ಅವುಗಳಿಗೆ ಯಾತ್ರಾರ್ಥಿಗಳಿ ಪ್ರೀತಿಯಿಂದ ಏನಾದರೂ ತಿನ್ನಲು ಕೊಟ್ಟು ಆಗಾಗ ಪೋಷಿಸುತ್ತಿದ್ದರು. ಅದರ ಜೊತೆಗೆ ಈ ಮಂಗಗಳು ಹಂತ ಹಂತಗಳಲ್ಲಿದ್ದ ಸಣ್ಣ ಪುಟ್ಟ ಅಂಗಡಿಗಳಿಂದ ಸಮಯ ಸಿಕ್ಕಾಗ ತಿಂಡಿಗಳನ್ನು ಲಪಟಾಯಿಸುವುದನ್ನೇನು ಬಿಡುವುದಿಲ್ಲ. ಏನೋ ದೈನ ಸೃಷ್ಟಿ ! ನಾವೇನೋ ಪ್ರಕೃತಿಯ ಮಡಿಲಿಗೆ ಆಗಾಗ ಭೇಟಿ ಕೊಡುತೇವೆಯೋ ಹೊರತು ಪ್ರಕೃತಿ ಮಾತೆಯ ಸನಿಹದ ಮಕ್ಕಳಾದ ಈ ಪ್ರಾಣಿ ಪಕ್ಷಿಗಳಿಗೆ ನಾವು ಕೇವಲ ತಾತ್ಕಾಲಿಕ ಅತಿಥಿಗಳಷ್ಟೇ. ಅವು ಕೇಳುತ್ತಾವೋ ಕದ್ದು ಕೀಳುತ್ತಾವೋ ಅವುಗಳ ಇಚ್ಚೆ. ನಾವು ಹೊಂದುಕೊಳ್ಳಬೇಕಷ್ಟೇ.
ಮತ್ತೆ ಮುಂದುವರೆಸುತ್ತಾ ಮೊದಲನೇ ಬೆಟ್ಟದ ತಪ್ಪಲಿಗೆ ಬಂದು ವೆಳ್ಳೇನ ಗಿರಿಯ ದಂಡಯಾತ್ರೆ ಮುಗಿಸಿದೆವು.

ಈ ಏಳು ಪರ್ವತಗಳನ್ನು ಮಾನವ ದೇಹದ ಏಳು ಚಕ್ರಗಳಿಗೆ ಸಂಕೇತಿಸುತ್ತಾರೆ. ಮೊದಲನೆಯ ಬೆಟ್ಟ ಮೂಲಾಧಾರ, ಇದನ್ನೇರುವುದು ಆಧ್ಯಾತ್ಮ ಸಾಧಕರಿಗೆ ಕಷ್ಟ, ನಂತರದ ಸ್ವಾದಿಷ್ಟಾನ, ಮಣಿಪುರ , ಅನಾಹತ, ವಿಶುದ್ಧ , ಆಜ್ಞಾ ಮತ್ತು ಮೇಲ್ಹಂತದ ಅಂತಿಮ ಶಿಖರವೇ ಸಹಸ್ರಾರ ಚಕ್ರ. ಈ ಜ್ಞಾನವನ್ನರಿತು ಪೂಜ್ಯಭಾವನೆಯಿಂದ ಪರ್ವತವನ್ನೇರಿದರೆ ಆಧ್ಯಾತ್ಮದ ದಿವ್ಯ ಸ್ಪರ್ಷ ಅನುಭವಕ್ಕೆ ಬರುತ್ತದಂತೆ. ಹಾಗೆ ಸುಮ್ಮನೆ ಸಮಯ ಕಳೆಯಲು ಬಂದರೆ ದಕ್ಷಿಣ ಭಾರತದ ಸರ್ವೇಸಾಮಾನ್ಯ ಪರ್ವತ ಚಾರಣವಷ್ಟೇ. ಇದು ಕೇವಲ ಚಾರಣ ಪರ್ವತವಲ್ಲ, ಬದಲಾಗಿ ಶಿವನೇ ತಂಗಿದ್ದ ದಕ್ಷಿಣ ಕೈಲಾಸ.