Thursday 9 April 2015

ಪ್ಲಾಸಿ ಕದನ


ಜೂನ್ 18 , 1757
          ರಾಬರ್ಟ್ ಕ್ಲೈವ್ ಕಲ್ಕತ್ತಾದಿಂದ ಎಂಭತ್ತು ಮೈಲಿ ಉತ್ತರದಲ್ಲಿರುವ ಖಾಟ್ವಾ ಎಂಬಲ್ಲಿಗೆ 800 ಆಂಗ್ಲ ಸೈನಿಕರೊಂದಿಗೆ ಮತ್ತು 2200 ಸ್ಥಳೀಯ ಭಾರತೀಯ ಸಿಪಾಯಿಗಳೊಂದಿಗೆ ಬಂದು ಬಿಡಾರ ಹೂಡಿರುತ್ತಾನೆ.
ಪಕ್ಕದ ಹಳ್ಳಿಯ ಪ್ಲಾಸಿಯಲ್ಲಿ ನವಾಬ ಸಿರಾಜುದ್ದೌಲನು 50000 ಉತ್ತಮ ತರಬೇತಿ ಹೊಂದಿದ ಶಿಸ್ತುಬದ್ಧ ಸೇನೆಯೊಂದಿಗೆ 53 ಭಾರೀ ತೋಪುಗಳೊಡನೆ ಸಜ್ಜಾಗಿರುತ್ತಾನೆ ! . ಅದರಲ್ಲಿ 15000 ಬಲದ ಒಂದು ದೊಡ್ಡ ಅಶ್ವದಳದವೂ ಇತ್ತು.
ಬ್ರಿಟಿಷರಿಗೆ ಈ ಪ್ಲಾಸಿ ಕದನ ಭಾರತದಲ್ಲಿನ ಅತ್ತಿತ್ವಕ್ಕೇ ಸವಾಲಾಗಿ ಎದುರಾಗಿತ್ತು !

          ಕ್ಲೈವ್ ತನ್ನ ಮೇಜರ್ ಕಿಲ್ಪಟ್ರಿಕ್ ಮತ್ತು ಇನ್ನು ಐದು ಸೇನಾ ನಾಯಕರ ಬೈಠಕ್ ನಲ್ಲಿ ಸದ್ಯದ ಪರಿಸ್ಥಿತಿಯಲ್ಲಿ ನವಾಬನೊಂದಿಗೆ ಸೆಣೆಸಲು ಯೋಗ್ಯವೋ ಅಥವಾ ಇನ್ನು ಕೆಲ ಸಮಯ ಕಾಯಬೇಕೋ ಎಂಬ ಪ್ರಷ್ಣೆಯನ್ನು ಮುಂದಿಟ್ಟಾಗ, ಪ್ರತಿಯೊಬ್ಬರೂ ಭಾರೀ ಸೋಲಿನ ಅಪಾಯವಿದ್ದು ಯೋಚನೆಯನ್ನೇ ಕೈಬಿಡುವಂತೆ ಸೂಚಿಸುತ್ತಾರೆ. ಮತ್ತೊಬ್ಬ ಮೇಜರ್ ಐಯರ್ ಕೂಟ್ ನವಾಬನ ಬಿಡಾರಕ್ಕೇ ಲಗ್ಗೆ ಇಟ್ಟು ಯುದ್ಧ ಮುಗಿಸಬೇಕೆಂದು ಉಪಾಯ ಕೊಡುತ್ತಾನೆ. ಆದರೂ ವಾರ್ ಕೌಂಸಿಲ್ ಯಾವ ಯೋಜನೆಗಳಿಗೂ ಬಹುಮತ ಸಿಗದೆ ಕ್ಲೈವ್ ಸಾಹೇಬರಿಗೆ ನಿರ್ಧಾರ ತೆಗೆದುಕೊಳ್ಳಲಾಗದೇ ತಳಮಳಗೊಳ್ಳುತ್ತಾನೆ.
          ಕ್ಲೈವ್ ಒಬ್ಬನೇ ಅಲ್ಲಿಯ ಒಂದು ಮಾವಿನ ತೋಪಿನಡಿ ಶತಪಥ ಹಾಕುತ್ತಾ ಯೋಚಿಸಿ , ಮತ್ತೂ ತಡಮಾಡಿದರೆ ನವಾಬನಿಗೆ ಮತ್ತೆ ಫ್ರೆಂಚರ ಸಹಾಯ ಮತ್ತಷ್ಟು ದೊರೆಯುವ ಸಾಧ್ಯತೆಯಿದ್ದು . ಹಾಗೇ ಈ ಮಾವಿನ ತೋಪು ನವಾಬನ ಸೇನೆಯಿಂದ ಕೇವಲ ಒಂದು ಮೈಲಿ ದೂರದಲ್ಲಿದ್ದು ತನ್ನಲ್ಲಿರುವ ಕೇವಲ ಏಳೇ ಏಳು ಫಿರಂಗಿಗಳಿಗೆ ಒಳ್ಳೆಯ ರಕ್ಷಣಾತ್ಮಕ ಸ್ಥಳ ಮತ್ತು ಈ ಜಾಗದಿಂದ ಫಿರಂಗಿಗಳನ್ನು ಸಮರ್ಥವಾಗಿ ಬಳಸಬಹುದು ಎಂದು ರಣ ತಂತ್ರ ಯೋಚಿಸಿದ. ಮತ್ತು ಅದೇ ದಿನ ದೇಶದ್ರೋಗಿ ಮೀರ್ ಜಾಫರ್ ನನ್ನು ಭೇಟಿಯಾಗಿ ನವಾಬ ನೇನೆಯ ಎಲ್ಲಾ ವಿವರಗಳನ್ನು ಪಡೆಯುತ್ತಾನೆ. ಅದೇನೋ ಭಂಢ ಧೈರ್ಯದ ಮೇಲೆ ಕ್ಲೈವ್ ರಣಕ್ಕೆ ಸಜ್ಜಾದ.

          ಆದರೆ ನವಾಬ ಒಬ್ಬ ಹತ್ತೊಭತ್ತು ವರ್ಷದ ಬಾಲಕ . ದುಡುಕಿನ ಸ್ವಭಾವ ಮತ್ತು ದರ್ಪದ ವ್ಯಕ್ತಿತ್ವ. ಯುದ್ಧಕ್ಕೆ ಎಲ್ಲಾ ರೀತಿಯ ಸೇನಾಬಲವಿದ್ದರು ಒಂದು ಸಣ್ಣ ತಪ್ಪಾಗಿತ್ತು. ಅದು ಮುಂಗಾರು ಮಳೆಗಾಲ. ರಣಕ್ಷೇತ್ರದಲ್ಲಿ ಮದ್ದುಗುಂಡುಗಳನ್ನು ನೀರಿನಿಂದ ರಕ್ಷಿಸಲು ಟಾರ್ಪಲೀನ್ ಗಳನ್ನು ಹೊದಿಸಬೇಕಾಗಿತ್ತು ಆದರೆ ಧಾವಂತದಲ್ಲಿ ಬಂದ ನವಾಬ ಇದರ ಮಹತ್ವವನ್ನು ಮನಗಾಣಲಿಲ್ಲ. ಆದಿನ ಜೋರಾಗಿ ಮಳೆ ಸುರಿಯಿತು. ಕ್ಲೈವ್ ನಾದರೋ ಮದ್ರಾಸ್ ನಿಂದ ಟಾರ್ಪಲೀನ್ ಗಳನ್ನು ತಂದಿದ್ದ ಮತ್ತು ಮಳೆ ಬರಿವ ಹೊತ್ತಿಗೆ ತನ್ನ ಫಿರಂಗಿಗಳನ್ನು ರಕ್ಷಿಸಿದ್ದ.

ಮಳೆಯ ನಂತರ ಯುದ್ಧ ಪ್ರಾರಂಭವಾಯಿತು. ( ಜೂನ್ 23 , 1757 )
ಸಿರಾಜ್ ನ 53 ಫಿರಂಗಿಗಳು ನೀರಿಗೆ ನೆನೆದು ಠುಸ್ ಎಂದವು !

          ಆದರೂ ಸಂಖ್ಯಾಬಲದ ಮೇಲೆ ನವಾಬನ ಸೇನೆ ಬ್ರಿಟಿಷರ ಮೇಲೆ ಮುಗಿಬಿತ್ತು. ಆಗ ಬ್ರಿಟಿಷರು ತಮ್ಮ ತೋಪುಗಳನ್ನು ತೆರೆದರು. ನವಾಬನ ಸೇನೆಯು ತೋಪಿನ ಧಾಳಿಗೆ ಚೆಲ್ಲಾಪಿಲ್ಲಿ ಯಾಗಿ ಸೇನೆಯ ನಡಿವ್ಯೂಹ ಮುರಿದು ಬಿದ್ದು ಅನೇಕ ಫೌಜದಾರರು ಸತ್ತರು. ಮೀರ್ ಮದನ್ ಸಾವಿಗೀಡಾದ.

          ಆಗ ಸಿರಾಜ್ ತನ್ನ ಮತ್ತೊಬ್ಬ 10000 ಸೇನೆಯ ಮುಖ್ಯಸ್ಥ ಮೀರ್ ಜಾಫರ್ ನಿಗೆ ಮುನ್ನುಗ್ಗಲು ಸೂಚಿಸಿದ.
ಜಾಫರ್ ಅವನ ಆದೇಶವನ್ನು ಕಡೆಗಣಿಸಿ ಬ್ರಿಟಿಷರೊಂದಿಗೆ ಪರಾರಿಯಾದ.
ಆ ದಿನ ಭಾರತದಲ್ಲಿ ಕಣ್ಮುಚ್ಚ ಬೇಕಾಗಿದ್ದ ಬ್ರಿಟಿಷ್ ಸಾಮ್ರಾಜ್ಯಕ್ಕೆ ಮರುಜೀವ ಬಂತು.


          ಮೀರ್ ಜಾಫರ್ ನೇನೋ ದ್ರೋಹ ಬಗೆದನಾದರೂ ಅದನ್ನು ಬದಿಸರಿಸಿ ಎಲ್ಲಾದರೂ ನವಾಬ ತನ್ನ ಫಿರಂಗಿಗಳನ್ನು ರಕ್ಷಿಸಿಕೊಂಡಿದ್ದರೆ ಇತಿಹಾಸವೇ ಬೇರೆಯಾಗುತ್ತಿತ್ತು.


No comments:

Post a Comment