Monday 20 November 2017

ಖೈಬರ್ ಪಾಸ್




ಸುಮಾರು ೮ ನೆಯ ಅಥವಾ ೯ ನೆಯ ಶತಮಾನದಲ್ಲಿ ಉತ್ತರ ಭಾರತದ ಒಂದು ಪ್ರಾಂತ್ಯದಲ್ಲಿ , ಪ್ರಾಯಶಃ ಪೃಥ್ವಿ ರಾಜ ಚೌಹಾನನ ಪೂರ್ವಜರ ರಾಜ್ಯವಿರಬಹುದು . ಅಲ್ಲಿನ ಮಂತ್ರಿಮಂಡಲ ರಾಜನೆದುರು ಒಂದು ಪ್ರಸ್ತಾಪವನ್ನು ಇಟ್ಟಿತು . ಅದೇನೆಂದರೆ ಅಫ್ಘನ್ ಪ್ರದೇಶವನ್ನು ತಾಗುವ ಪರ್ವತಗಳ ಸಾಲುಗಳ ನಡುವಿನ ಹಾದಿಯಾದ ಖೈಬರ್ ಪಾಸಿಗೆ ವಿರುದ್ಧವಾಗಿ ಒಂದು ಮಹಾಗೋಡೆಯನ್ನು ನಿರ್ಮಿಸಿ ಮಧ್ಯ ಏಷಿಯಾದ ಇಸ್ಲಾಮೀ ಧಾಳಿಕೋರರನ್ನು ತಡೆಯಬಹುದೆಂದು ಮತ್ತು ಈ ಗೋಡೆಯನ್ನು ನಿರ್ಮಿಸಲು ಪ್ರಜೆಗಳ ಮೇಲೆ 'ದ್ವಾರ ತೆರಿಗೆ' ಯನ್ನು ವಿಧಿಸಬೇಕಾಗುತ್ತದೆಂದು. ಚೀನಾದ ಗೋಡೆಯೇನೋ ಸಾವಿರಾರು ಕಿ ಮೀ ನಷ್ಟರದ್ದು ಆದರೆ ಈ ಗೋಡೆ ಕೇವಲ ಕೆಲವು ಕಿ ಮೀಗಳ ಉದ್ದನೆಯದು.

ಆದರೆ . . . ಜನರು ಈ ಯೋಜನೆಗಾಗಿ ಹೆಚ್ಚುವರಿ ತೆರಿಗೆ ಕಟ್ಟಲು ಒಪ್ಪದೆ ಪ್ರತಿಭಟಿಸಿದರು. ಆದ್ದರಿಂದ ಈ ಯೋಜನೆ ಕೈಬಿಟ್ಟಿತು.

ಕೆಲವು ವರ್ಷಗಳ ನಂತರ ಮೊಹಮ್ಮದ್ ಶಬುಕ್ತಜಿನ್ ಘಜನಿ ಇದೇ ಖೈಬರ್ ಹಾದಿಯಿಂದ ಭಾರತದೆತ್ತ ದಂಡೆತ್ತಿ ಬಂದ. ಮತ್ತಿದೇ ಮಾರ್ಗವಾಗಿ ಟನ್ನುಗಟ್ಟಲೆ ಚಿನ್ನವನ್ನು ಹೊತ್ತುಕೊಂಡು ಹೋದ. ಅಷ್ಟಲ್ಲದೇ ಇಪ್ಪತ್ತು ವರ್ಷಗಳಲ್ಲಿ ಹದಿನೇಳು ಬಾರಿ ಇದೇ ದಾರಿಯಲ್ಲಿ ನಿರಾಯಾಸವಾಗಿ ಹೋಗಿಬರುತ್ತಾ ತನ್ನ ದಂಡಯಾತ್ರೆಗಳನ್ನು ಮುಗಿಸಿದ .

ಅವನ ನಂತರ ಮೊಹಮ್ಮದ್ ಘೋರಿ, ತೈಮೂರ್ , ಬಾಬರ್, ನಾದಿರ್ ಷಾಹ್, ಅಹ್ಮದ್ ಷಾಹ್ ಪ್ರತಿಯೊಬ್ಬರೂ ಬಳಸಿದ್ದು ಇದೇ ಖೈಬರ್ ಪಾಸನ್ನು

No comments:

Post a Comment