Tuesday 2 June 2015

ರಾಜಾ ಸುಹಲ್ ದೇವ್ : ಮರೆತುಹೋದ ಬಾಹ್ರೌಚ್ ಕದನ ವನ್ನು ನೆನೆಯುತ್ತಾ : ಭಾಗ ೧






            ಮಾಲಿಕ್ ಖಾಫುರ್ ದಕ್ಷಿಣ ಭಾರತಕ್ಕೆ ದಂಡೆತ್ತಿ ಬಂದಾಗ ಹೊಯ್ಸಳರು ಅವಸಾನದ ಹಾದಿಯಲ್ಲಿದ್ದರು ಮತ್ತು ಪಾಂಡ್ಯನ್ನಾರು ಅವನನ್ನು ಎದುರಿಸಲು ಸಮರ್ಥರಿರಲಿಲ್ಲ . ಬಾಬರ್ ದಂಡೆತ್ತಿ ಬಂದಾಗ ರಾಜಪೂತರಲ್ಲಿ ಒಮ್ಮತವಿರಲಿಲ್ಲ . ಹೀಗೆ ನಮ್ಮ ಪ್ರತಿಯೊಂದು ಸೋಲನ್ನು ಕೂಲಂಕುಷವಾಗಿ ಗಮನಿಸಿದರೆ ನಿರ್ಣಾಯಕ ಸಮರಗಳಲ್ಲಿ ಪ್ರಭಲವಾದ ಸಾಮ್ರಾಜ್ಯವಿಲ್ಲದೇ ಸೂತದ್ದು ಅಥವಾ ಯಾವುದಾದರೂ ಸಣ್ಣಪುಟ್ಟ ತಪ್ಪುಗಳಿಂದ ಸೋತದ್ದೆಂದು ಕಾಣಬಹುದು . ಆದರೆ ಇದನ್ನು ಮೀರಿ ಒಬ್ಬ ಸಣ್ಣ ಪ್ರಾಂತದ ಸಾಮಾನ್ಯ ದೊರೆ ಒಬ್ಬ ಪ್ರಭಲ ಇಸ್ಲಾಮಿ ಧಾಳಿಕೋರನನ್ನು ಬಗ್ಗು ಬಡಿದದ್ದು ಒಂದು ಅಪರೂಪದ ಉದಾಹರಣೆಯೂ ನಮ್ಮ ಇತಿಹಾಸದಲ್ಲಿದೆ . ಅವನೇ ರಾಜ ಸುಹಲ್ ದೇವ್ .

ಸುಹಲ್ ದೇವ್ ಗೂ ಮುನ್ನ ಪೀಠಿಕೆ ಎಂಬಂತೆ ಮುನ್ನೂರು ವರ್ಷಗಳ ಹಿಂದಿನ ಇತಿಹಾಸವನ್ನು ಪುನಃ ತಿರುವಿಹಾಕುವುದು ಅನಿವಾರ್ಯವೇ .

             ಎಂಟನೇ ಶತಮಾನದ ಆದಿಯಾಗಿ ಭಾರತದ ಸಿಂಧ್ ಪ್ರದೇಶಗಳಲ್ಲಿ ಅರಬ್ಬರ ನಿರಂತರ ಬರ್ಬರ ಧಾಳಿಗಳು ಆರಂಭವಾಗಿದ್ದವು. ಆದರೆ ಈ ಧಾಳಿಗಳನ್ನು ರಾಜಸ್ತಾನಿನ ಸಮರವು ಒಂದೇ ಸಲಕ್ಕೆ ಹಠಾತ್ತನೆ ವಿರಾಮ ಕೊಟ್ಟಿತು . ಕಾಶ್ಮೀರದ ಸಾಮ್ರಾಟ್ ಲಲಿತಾಡಿತ್ಯ ಮುಕ್ತಪೀಡನು (724 ಕ್ರಿ ಶ - 760 ಕ್ರಿ ಶ ) ಅರಬ್ಬರನ್ನು ನಿರ್ಣಾಯಕವಾಗಿ ಮಣಿಸಿ ಮತ್ತೆ ಭಾರತವನ್ನು ಗೆಲ್ಲುವ ಕನಸನ್ನು ಭಂಗಗೊಳಿಸಿದ . ಇದರಲ್ಲಿ ಇಸ್ಲಾಮೀ ದಂಡಯಾತ್ರೆಯ ಮೊದಲ ಅಧ್ಯಾಯ ಕೊನೆಗೊಂಡಿತು . ಮತ್ತು 719 ಕ್ರಿ ಶ  ರಲ್ಲಿ ದಕ್ಷಿಣ ತಾಜಿಕಿಸ್ತಾನದ ನಾರಾಯಣ , ಸಮರ್ಖಂಡದ ಗೊರಖ್ ಮತ್ತು ಭೂಕಾರದ ತುಷಾರಪತಿ ಮಧ್ಯ ಏಷ್ಯಾದಲ್ಲಿ ಅರಬ್ಬರ ಮುನ್ನುಗ್ಗುವಿಕೆಯನ್ನು ತಡೆದು ಮಧ್ಯೆ ಏಷ್ಯಾದಲ್ಲಿನ ಇಸ್ಲಾಮೀ ದಂಡಯಾತ್ರೆಯ ಅಧ್ಯಾಯಕ್ಕೆ ತಾತ್ಕಾಲಿಕ ವಿರಾಮವಿತ್ತರು . 

            ಮತ್ತೆ ಇಸ್ಲಾಮೀ ದಂಡಯಾತ್ರೆ ಪುನಶ್ಚೇತರಿಸಿಕೊಳ್ಳಲು ಮೂರು ಶತಮಾನಗಳು ಬೇಕಾಯಿತು. ಅದಕ್ಕೆ ತುರ್ಕರ ಇಸ್ಲಾಮೀ ಮತಾಂತರಗೊಂಡ ನಂತರ. ನಂತರ ಇಸ್ಲಾಮಿನ ಎರಡನೇ ಅಧ್ಯಾಯದ ದಂಡಯಾತ್ರೆಯನ್ನು ಮಹಮ್ಮದ್ ಘಜ್ನಿ ಭಾರತೀಯ ಅಫಘಾನಿಸ್ತಾನ ಮತ್ತು ಪಶ್ಚಿಮೋತ್ತತರ ಪ್ರಾಂತ್ಯಗಳನ್ನು ಭೇದಿಸುತ್ತಾ ಮುನ್ನುಗ್ಗಿ ಪುನರಾರಂಭಿಸಿದ . 1026 ಕ್ರಿ ಶ ದಲ್ಲಿ ಸೋಮನಾಥನನ್ನು ಕೊಳ್ಳೆ ಹೊಡೆಯುತ್ತಿದ್ದಾಗ ಘಜ್ನಿ ಯೊಂದಿಗೆ ತನ್ನ ಹನ್ನೊಂದು ವರ್ಷದ ಅಳಿಯ ಸಯ್ಯದ್ ಸಲಾರ್ ಮಸೂದ  ಜೊತೆಗಿದ್ದ ( ಘಜ್ನಿಯ ತಂಗಿ ಸಿತಾರ್-ಇಮು-ಅಲ ನ ಮಗ ). ಘಜ್ನಿ ಯ ಸಾವಿನನಂತರ ಒಂದು ಲಕ್ಷ ( ಕ್ರಿ ಪೂ 1031 )ಪ್ರಭಲ ಸೇನೆಯೊಂದಿಗೆ ಭಾರತಕ್ಕೆ ದಂಡೆತ್ತಿ ಬಂದ . ಆ ವಯಸ್ಸಿನಲ್ಲಿಯೇ ಮಸೂದ್ ಮಾವನ ಮತಾಂಧತೆ ಮತ್ತು ರಣಕೌಶಲ್ಯವನ್ನು ಮೈಗೂಡಿಸಿಕೊಂಡಿದ್ದ . 

ಮಸೂದ್ ತನ್ನ ಮೊದಲ ಸೇನಾ ಕಲಹ ದೆಹಲಿಯ ರಾಜ ಮಹಿಪಾಲ್ ತೋಮರ್ ನೊಂದಿಗೆ ಕೇವಲ ಕೆಲವು ಘಜ್ನಿಯ ಸೇನಾ ನೆರವಿನಿಂದ ಮಣಿಸಿದ . ಇಲ್ಲಿಂದ ನೇರ ಮೀರತ್ ನಲ್ಲಿ ಧಾಳಿ ಮಾಡಿ ಹರಿದತ್ತ ನನ್ನು ಬಂಧಿಸಿ ಬಲವಂತವಾಗಿ ಇಸ್ಲಾಂ ಸ್ವೀಕರಿಸುವಂತೆ ಮಾಡಿದ . ಮತ್ತೆ ಅಲ್ಲಿಂದ ಕಾನೂಜ್ ನನ್ನು ವಶಪಡಿಸಿಕೊಂಡು ಅಲ್ಲಿನ ಸ್ಥಳೀಯ ಆಡಳಿತಗಾರರೆಲ್ಲಾ ಇಸ್ಲಾಂ ಸ್ವೀಕರಿಸಿ ಅಪಾರ ಮೊತ್ತದ ಧನವನ್ನು ಮಸೂದ್ ನ ಕೈಗೊಪ್ಪಿಸಿದರು . ಕಾನೂಜ್ನನ್ನು ತನ್ನ ಸೇನಾ ನೆಲೆ ಯನ್ನಾಗಿಸಿ ತನ್ನ ಮುಂದಿನ ವಿಸ್ತಾರಕ್ಕಾಗಿ ಯೋಜನೆ ರೂಪಿಸುತ್ತಿದ್ದ .

ಆ ಸಮಯದಲ್ಲಿ ಪಾಸಿ ಎಂಬ ಎಂಬತ್ತರಿಂದ ತೊಂಬತ್ತು ಲಕ್ಷ ಜನಸಂಖ್ಯೆಯ ಬುಡಕಟ್ಟು ಜನಾಂಗ ಅವಧ್ ಮತ್ತಿತರೆ ಸ್ಥಳೀಯ ಪ್ರದೇಶಗಳನ್ನು ಆಳುತ್ತಿದ್ದರು . ಇವನ ಜನಾಂಗ ಮಧ್ಯಪ್ರದೇಶ , ಮಹಾರಾಷ್ಟ್ರ , ಗುಜರಾತ್ , ಹರಿಯಾಣ , ಪಂಜಾಬ್ ಮತ್ತು ಓರಿಸ್ಸಾದಲ್ಲೂ ಇದ್ದು ಆದರೆ ಇವರ ಅಧಿಕವಾಗಿ ಉತ್ತರಪ್ರದೇಶದಲ್ಲಿ ನೆಲೆಸಿರುತ್ತಾರೆ . ತಾವು ಭೃಗುವಿನ ಮೂಲದವರೆಂದು ನಂಬಿದ್ದ ಇವರು ಪೌರಾಣಿಕ ಹಿನ್ನಲೆಯಿದ್ದು ಉತ್ತಮ ಯೋಧರ ವಂಶಸ್ಥರೆಂದು ಬ್ರಿಟಿಷರಕಾಲದಲ್ಲೂ  ಹೆಸರುವಾಸಿ . 

ಆ ಪಾಸಿ ರಾಜವಂಶಸ್ಥರಲ್ಲಿ ಕಾನೋಜ್ ಮೇಲೆ ವೈರತ್ವವಿದ್ದರೂ ಇಸ್ಲಾಮಿನ ಧಾಳಿಯ ತರುವಾಯ ತಮ್ಮ ನಿಲುವನ್ನು ಬದಲಾಯಿಸಿದರು . ಮಸೂದ್ ನ ಸಮಯದಲ್ಲಿ ಶ್ರಾವಸ್ತಿಯನ್ನು ರಾಜ ಸುಹಲ್ ದೇವ್ ಆಳುತ್ತಿದ್ದ .
ಮಸುದ್ ನ ಹುಟ್ಟದಗಿಸಲು ಸುಹಲ್ ದೇವ್ ಎದುರಾಗುವುದೊಂದೇ ಬಾಕಿಯಿತ್ತು . ಸಮಯ ಮತ್ತು ಸ್ಥಳದ ಅಂತರವೊಂದೇ ತಾತ್ಕಾಲಿಕ ಗೋಡೆಯಂತಿತ್ತು .

1 comment: