Tuesday 2 June 2015

ರಾಜಾ ಸುಹಲ್ ದೇವ್ : ಮರೆತುಹೋದ ಬಾಹ್ರೌಚ್ ಕದನ ವನ್ನು ನೆನೆಯುತ್ತಾ : ಭಾಗ ೨





                 ಸಲರ್ ಮಸೂದ್ ನ ದಂಡಯಾತ್ರೆ ಯ ಸಮಯದಲ್ಲಿ ಲಕ್ಷ್ಮೀಪುರ , ಸೀತಾಪುರ, ಲಖ್ನೋ , ಬಾರಾಬಂಕಿ, ಉನ್ನಾಓ , ಫೈಸಾಬಾದ್ , ಬಹ್ರೈಚ್ , ಶ್ರಾವಸ್ತಿ ಮತ್ತು ಗೋಂಡಾ ಪ್ರಾಂತಗಳನ್ನು ಸುಹಲ್ ದೇವ್ ನ ಇಪ್ಪತ್ತೊಂದು ಸಾಮಂತರು ಆಳುತ್ತಿದ್ದರು . ಮೀರತ್ , ಕನೌಜ್ , ಮಹೀಲಬಾದ್ ಗಳಲ್ಲಿ ವಿಜಯದುಂದುಬಿ ಬಾರಿಸಿ ಮಸೂದ್ ಬಾರಾಬಂಕಿ ಜಿಲ್ಲೆಯ ಸತ್ರಿಕ್ ಎಂಬಲ್ಲಿ ಬಂದ. ಆ ಪ್ರದೇಶ ವಸಿಸ್ಠರು ರಾಮ ಲಕ್ಷ್ಮಣರಿಕೆ ಪಾಠ ಹೇಳಿಕೊಟ್ಟ ಪುಣ್ಯಕ್ಷೇತ್ರವೆಂದು ನಂಬುತ್ತಾರೆ. ಈ ಜಾಗವನ್ನು ಮಸೂದ್ ಸೇನಾನೆಲೆಯಾಗಿಸಿ ಸುತ್ತಮುತ್ತಲ ಪ್ರದೇಶಗಳನ್ನು ಕಬಳಿಸಲು ಸೇನೆಯನ್ನು ಕಳಿಸುತ್ತಿದ್ದ . 

               ಮಸೂದ್ ತನ್ನ ಒಬ್ಬೊಬ್ಬ ಫೌಜುದಾರುಗಳನ್ನು ವಿವಿಧ ದಿಕ್ಕುಕಳಲ್ಲಿ ಹಬ್ಬಿಸಿದ . ಮಿಯ್ಯ ರಜಬ್ ಮತ್ತು ಸಲರ್ ಸೈಪುದ್ದೀನ್ ಬಹ್ರೈಚ್ ನನ್ನು ವಶಪಡಿಸಿಕೊಂಡರು . ಹಾಗೆಯೇ ಅಮೀರ್ ಹಸನ್ ಮಹೋನ , ಮಲಿಕ್ ಫಜಲ್ ವಾರಣಾಸಿ , ಸಯ್ಯದ್ ಸಾಹು ಕರ್ರಾ ಮತ್ತು ಮಣಿಕಾಪುರಗಳನ್ನು ವಶಪಡಿಸಿಕೊಂಡ . ಸಯ್ಯದ್ ಅಜೀಜ್ ಉದ್ದೀನ್ ಸಹಲ್ ದೇವನ ಸಾಮಂತ ಹರದೋಯಿ ವಿರುದ್ಧ ಹೊರಟಿದ್ದ . ಆದರೆ ಅಜೀಜ್ ಗೋಪಮಾವು ಕದನದಲ್ಲಿ ಸಾವಿಗೇದಾಗಿ ಸೇನೆ ಹಿಮ್ಮೆಟ್ಟಿತು . ಮಸೂದ್ ನ ದೂಸ್ತ್ ಮಹಮ್ಮದ್ ರೇವಾರಿಯ ದೂಂದಘಡದಲ್ಲಿ ಮುತ್ತಿಗೆ ಹಾಕಿದಾಗ ಸಮಸ್ಯೆ ಉಂಟಾಯಿತು . ಮಸೂದ್ ಮಹಮ್ಮದ್ ನ ಸಹಾಯಕ್ಕೆಂದು ತನ್ನ ಧರ್ಮಗುರು ಸಯ್ಯದ್ ಇಬ್ರಾಹಿಂ ಮಶ್ಶಾದಿ ಬಾರಹ್ ಹಜಾರಿ ಯನ್ನು ಕಳಿಸುತ್ತಾನೆ.  ಸಯ್ಯದ್ ಇಬ್ರಾಹಿಂ ಒಬ್ಬ ಉತ್ಕಟ ಮತಾಂಧ ಸೇನಾಪತಿಯಾಗಿದ್ದು ತಾನು ಹೋದಲ್ಲೆಲ್ಲಾ ಕಾಫಿರರು ಮುಸಲ್ಮಾನರಗಡೇ ಅಥವಾ ಸಾಯಿಸದೇ ಬಿಡಿತ್ತಿರಲಿಲ್ಲ . ಪುಣ್ಯವೆಂಬಂತೆ ಸಯ್ಯದ್ ಇಬ್ರಾಹಿಂ ಮತ್ತು ಇನ್ನೂ ಅನೇಕ ಮಸೂದ್ ನ ಸೇನಾ ನಾಯಕರನ್ನೂ ದುಂಧಾಗಢ್ ಕದನದಲ್ಲಿ ಸೋಲಿಸಿ ಕೊಲ್ಲಲಾಯಿತು . 

ಅದೇ ಸಮಯದಲ್ಲಿ ಸಲರ್ ಸೈಫುದ್ದೀನ್ ನನ್ನು ಬಹ್ರೈಚ್ ನಲ್ಲಿಯೇ ತಡೆಯಲಾಗಿ ಅಯೋಧ್ಯೆಗೆ ಮುನ್ನೆಡೆಯಲು ಮಸುದನಿಗೆ  ಪ್ರತಿರೋಧ ಒಡ್ಡಿದಂತಾಯ್ತು . ಸಲರಪುರ ಎಂಬ ಹೊರವಲಯದ ಒಂದು ಪಟ್ಟಣದಲ್ಲಿ ನಿಲ್ಲುತ್ತಾನೆ . ಮಸೂದ್ ತನ್ನ ಸೇನೆಯನ್ನು ಉತ್ತರಕ್ಕೆ ಪಯಣಿಸಿ ಸೈಫುದ್ದೀನನಿಗೆ ಬಲವರ್ಧನೆಗೆ ಬಹ್ರೌಚ್ ಗೆ ನಡೆಯಬೇಕಾಯಿತು . ಬಹ್ರೌಚ್ ನ ಪಾಳೆಗಾರರೆಲ್ಲಾ ಭಾಕ್ಲಾ ನದಿ ದಂಡೆಯಲ್ಲಿ ನೆರೆದಿದ್ದರು . ಮಸೂದ್ ರಾತ್ರಿ ವೇಳೆ ಒಂದು ಕಿರು ಧಾಳಿ ಮಾಡಿ ಸ್ವಲ್ಪ ಜಯಗಳಿಸಿದನಾದರೂ ನಂತರ ಉಭಯ ಪಕ್ಷದವರಿಗೂ ಬಿಕ್ಕಟ್ಟು ತಂದಿತು. 

ಬಹುಪಾಲು ಎಲ್ಲಾ ಸರಹದ್ದುಗಳಲ್ಲೂ ಪೂರ್ಣ ಯಶಸ್ಸಿಲ್ಲದೆ ಅಥವಾ ಸೋಲನ್ನುಂಡ ಮಸುದನಿಗೆ ಬಹ್ರೌಚ್ ನಲ್ಲಿ ಅಂತಿಮ ತೆರೆ ಬೀಳುವ ಕ್ಷಣ ಹತ್ತಿರ ಬಂದಿತ್ತು . 

ಅದು ಸುಹಾಲ್ ದೇವ್ ಮತ್ತು ಅವನ ತಮ್ಮ ಬಹಿರ್ ದೇವ್ ಬಹ್ರೌಚ್ ಗೆ ಬಂದ ವೇಳೆ . ಜೂನ್ ೧೩ ೧೦೩೩ ರರಂದು ನೈಜ ಸಮರ ಬಹ್ರೌಚ್ ನ ಚಿತ್ತೋರ ಕೊಳದ ಸಮೀಪ ತೆರೆ ಕಾಣಲಿತ್ತು .

          ಇಸ್ಲಾಮೀ ಸೇನೆಯ ಬಲಪಾರ್ಶ್ವದ ಫೌಜುದಾರ್ ಮೀರ್ ನಸ್ರುಲ್ಲಾ ಸಾವಿಗೀಡಾಗುತ್ತಿದ್ದಂತೆ ಆ ಭಾಗದ ಸಮಸ್ತ ಸೇನೆ ಕುಸಿದು ಬಿತ್ತು . ತಕ್ಷಣವೇ ಮಿಯ್ಯ ರಾಜಾಬ್ ನನ್ನು ಕೊಲ್ಲಲಾಯಿತು . ಮುಸಲ್ಮಾನರ ಸೇನೆಯಲ್ಲಿ ಗೊಂದಲವಾಗುತ್ತಿದ್ದಂತೆ ರಾಜಾ ಕರಣ್ ನೇತೃತ್ವದ ಒಂದು ದೊಡ್ಡ ಸೇನಾ ತುಕಡಿ ಮುಸಲ್ಮಾನ ಸೇನೆಯ ಕೇಂದ್ರ ಭಾಗಕ್ಕೇ ಮುನ್ನುಗ್ಗಿ ಬಲವಾದ ಹೊಡೆತ ನೀಡಿತು . ಸಲರ್ ಮಸೂದನನ್ನು ಸುಹಾಲ್ ದೇವನೇ ತಲೆ ಕಡಿದ ಅಥವಾ ಬಾಣವು ಅವನ ಕತ್ತನ್ನು ಚೇದಿಸಿತೆಂದೊ ಹೇಳುತ್ತಾರೆ. ಪವಿತ್ರ ಸೂರ್ಯಕುಂಡದ ಬಳಿ ಮಸೂದ್ ಸಾಯುತ್ತಾನೆ.
ತದನಂತರದ ದಿನ ಸಲರ್ ಇಬ್ರಾಹಿಂ ಸೇಡನ್ನು ತೀರಿಸಿಕೊಳ್ಳಲು ಸುಹಲ್ ದೇವನ ಮೇಲೆ ಪ್ರತಿಧಾಳಿ ಮಾಡಿದನಾದರೂ ಏನೂ ಪ್ರಯೋಜನವಾಗಲಿಲ್ಲ . ಬಹ್ರೌಚ್ ಕದನ ಸಮಾಪ್ತಗೊಂಡು ಎರಡು ಶತಮಾನಗಳ ಕಾಲ ಉತ್ತರ ಭಾರತ ಇಸ್ಲಾಮೀ ದಬ್ಬಾಳಿಕೆಯಿಂದ ಪಾರಾಯಿತು .

No comments:

Post a Comment