Friday 5 June 2015

ಬಾಹ್ರೌಚ್ ನ ಸುತ್ತಮುತ್ತ ಮತ್ತಷ್ಟು : ಭಾಗ ೩



            ಬಾಹ್ರೌಚ್ ನಲ್ಲಿ ಗೆದ್ದ ತರುವಾಯ ಸುಹಾಲ್ ದೇವ್ ವಿಜಯ ದ್ಯೋತಕ ವಾಗಿ ಅಲ್ಲಲ್ಲಿ ಸುತ್ತಮುತ್ತ ನೀರಿನ ಕೊಳಗಳನ್ನು ಕಟ್ಟಿಸಿದ . ಈ ಬಹ್ರೌಚ್ ಕದನದ ವಿಶೇಷತೆಯೆಂದರೆ ಒಂದು ದೊಡ್ಡ ಮುಸಲ್ಮಾನ ಸೇನೆಯನ್ನ ಒಂದು ಗುಂಪಿನ ಸಣ್ಣ ಸಣ್ಣ ರಾಜರುಗಳು ಹೊಡೆದು ಸೋಲಿಸಿದ್ದಲ್ಲದೆ ಶತ್ರು  ಪಡೆಗಳನ್ನು ನಿಶ್ಯೇಷವಾಗಿ ಒಬ್ಬ ಸೈನಿಕನನ್ನೊ ಉಳಿಸದೇ ಸರ್ವನಾಶ ಮಾಡಿದ್ದು . ಮತ್ತೊಂದು ಗಮನಾರ್ಹ ಅಂಶವೇನೆಂದರೆ ಆ ಸೇನೆಯನ್ನೇ ಮಹಮ್ಮದ್ ಘಜ್ನಿ ತನ್ನ ದಂಡಯಾತ್ರೆಗಳಲ್ಲಿ ಬಳಸಿದ್ದು ಮತ್ತು ಆ ಸಮಕಾಲೀನ ಭಾರತೀಯರಿಗೆ ಆ ಸೇನೆ ಒಂದು ಮಟ್ಟಕ್ಕೆ “ ಆಧುನಿಕ “ ಶೈಲಿಯದ್ದೆ ಅನ್ನಬಹುದು. ಇನ್ನೂ ಸೋಮನಾಥನನ್ನು ಒಡೆದ ಘಾಜಿ ಸೇನೆ ಸರ್ವನಾಶವಾಯಿತು ಎಂದು ನಾವು ಊಹೆ ಮಾಡಬಹುದೆನ್ನುವುದು ಕಷ್ಟವೇನಲ್ಲ . ಕನೋಜಿನ ಚಂದ್ರದೇವನು ಇದು ಮುಸಲ್ಮಾನರ ಒಂದು ಸೋಲಷ್ಟೇ ಎಂದು ಮೂಗು ಮುರಿದು ಪುನಃ ವೈರತ್ವನನ್ನು ಮುಂದುವರೆಸಿದ .

           ಆದರೆ ಹದಿಮೂರನೇ ಶತಮಾನದ ಆದಿಯಲ್ಲಿ ದೆಹಲಿ ಸುಲ್ತಾನರಿಂದ ಮತ್ತೊಂದು ಇಸ್ಲಾಮೀ ಧಾಳಿಯಿಂದ ಕೊಚ್ಚಿಹೋಯಿತು .  ಆಗ ಆಕ್ರಮಿತ ಈ ರಣ ಕ್ಷೇತ್ರ ಮುಸ್ಲಿಮರಿಗೆ ಅಸಂಖ್ಯಾತ ಶಹೀದ ರ ಬಲಿದಾನವಾದ ಪುಣ್ಯ ಕ್ಷೇತ್ರ ವಾಯಿತು . ಸುಲ್ತಾನ್ ಫಿರೋಜ್ ಷಾ ತುಘ್ಲಕ್ ಬಾಲಕ್ ಋಷಿಯ ಆಶ್ರಮದಲ್ಲಿ ಸೂರ್ಯದೇವಾಲಯ ಮತ್ತು ಸೂರ್ಯಕುಂಡಕ್ಕೆ ತಾಗಿಕೊಂಡು ಒಂದು ಗೊಮ್ಮಟ ನಿರ್ಮಿಸುತ್ತಾನೆ . ಸೂರ್ಯಕುಂಡದ ಜಲಕ್ಕೆ ಚರ್ಮರೋಗ ಗುಣಪಡಿಸುವ ವಿಶೇಷವಾಗಿ ಕುಷ್ಠರೋಗ ನಿವಾರಿಸುತ್ತದೆಂದು ಹೇಳುತ್ತಾರೆ . ಆ ನೀರನ್ನು ವಿಶೇಷ ಗಿಡಮೂಲಿಕೆಗಳಿಂದ ಸಂಸ್ಕರಿಸಿದ್ದರ ಕಾರಣ .

         ಸೂರ್ಯಕುಂಡದ ಔಷಧೀಯ ಗುಣದ ಮೇಲೆನ ಶ್ರದ್ಧೆ ಇನ್ನೊ ಮುಂದುವರೆದಿದ್ದು ಚರ್ಮ ರೋಗ , ಕುಷ್ಠರೋಗ ಮತ್ತು ಸಂತಾನೂತ್ಪತ್ತಿದೋಷದ ಗುಣಮುಖಕ್ಕಾಗಿ ಇಲ್ಲಿ ಜನರು ಬರುತ್ತಿರುತ್ತಾರೆ. ಸೂರ್ಯನ ಆರಾಧನೆ ಎಂದಿನಂತೆ ಇನ್ನೂ ಮುಂದುವರೆಯುತ್ತಿದೆ . ಸಲಾರ್ ಮಸೂದ್ ನನ್ನು ಮುಸ್ಲಿಮರು ಸೂರ್ಯನ ಹುತಾತ್ಮ ( ಅಫ್ತಾಬ್ ಈ ಶಹದಾದ್ )ಎಂದು ಗೌರವಿಸುತ್ತಾರೆ ! ಅವನ ಸಮಾಧಿ ಇನ್ನೂ ಇದ್ದು ಸೂರ್ಯ ದೇವಾಲಯವನ್ನು ಹೊಜ್ ಶಂಶಿ ಎಂದು ಹೆಸರು ಪೆರ್ಷಿಯನ್ ಹೆಸರಿಗೆ ಬದಲಾಯಿಸಿಯೂ ಆಗಿದೆ  . ಅದಲ್ಲದೆ ಈಗ ಸಾಲರ್ ಮಸೂದನ ಕಥೆಯನ್ನು ಒಬ್ಬ ಶಾಪಗ್ರಸ್ತ ಹುಡುಗ ಅವಿವಾಹಿತನಾಗಿ ದಾರುಣ ಸಾವು ಕಂಡನೆಂದು ಮತ್ತು ಒಬ್ಬ ಸ್ವಾತಂತ್ರ ಹೂರಾಟಗಾರ ! ನಾಗಿ ಸುಹಲ್ ದೇವ್ ನೆಂಬ ದುಷ್ಟ  ರಾಜನೆದುರು ಸೆಣೆಸಿ   ಹುತಾತ್ಮ ನಾದ  “ ಧೀರ “ ನೆಂದು ಬಣ್ಣಿಸಿ ಕಥೆ ಕಟ್ಟಿದರು . ಈಗಲೂ ಎಲ್ಲಾದರೂ ರಭಸವಾಗಿ ಗಾಳಿ ಬೀಸಿದರೆ ದರ್ಗಾವನ್ನು ಕಬ್ಭಿನದ ದ್ವಾರದಿಂದ ಮುಚ್ಕಿ ಸರಪಳಿಯಿಂದ ಬಿಗಿಯುತ್ತರಂತೆ .  ಸುಹಾಲ್ ದೇವನ “ದುಷ್ಟ“ ಆತ್ಮ ಒಳ ಪ್ರವೇಶಿಸದಂತೆ ! 

            ಆದರೂ ಸುಹಾಲ್ ದೇವನ ನೆನಪು ಇಲ್ಲಿ ಸ್ಥಳೀಯ ಜನಮಾನಸದಲ್ಲಿ ಮತ್ತು ಆ ಪಂಗಡದವರಲ್ಲಿ ಅಚ್ಚಳಿಯದೇ ಉಳಿದಿದೆ . ಕ್ರಿ ಶ ೧೯೫೦ ರ ಮುಂಚೆಯೇ ಆ ಸ್ಥಳವನ್ನು ಮರುಪಡೆಯಬೇಕೆಂಬ ಚಳುವಳಿ ನಡೆದಿತ್ತು . ಇದಕ್ಕಾಗಿ ಚಿತ್ತೋರಾದಲ್ಲಿ ಒಂದು ಜಾತ್ರೆಗಾಗಿ ಅನುಮತಿಯನ್ನು ನಿರಾಕರಿಸಿ ಅಲ್ಲಿನ ಜಿಲ್ಲಾಧಿಕಾರಿ ಸೆಕ್ಷನ್ ೧೪೪ ಜಾರಿ ಮಾಡಿದ್ದ . ನಂತರದ ಕಾಂಗ್ರೆಸ್ ಆಡಳಿತದಿಂದ ಆ ಸೆಕ್ಷನ್ ೧೪೪ ಪುನರಾವರ್ತನೆಯಾಯಿತು . ಒಬ್ಬ ಪ್ರಯಾಗ್ ಪುರದ ಸ್ಥಳೀಯ ರಾಜ ಸುಹಾಲ್ ದೇವ್ ಸ್ಮಾರಕ್ ಸಮಿತಿಗೆ ನೆಲ ಮತ್ತು ಹಣ ದಾನಗೈದು ಸುಹಲ್ ದೇವನ ಪ್ರತಿಮೆಯನ್ನು ಸ್ಥಾಪಿಸಿದ . ತದನಂತರ ವೀರನಿಗೆ ಒಂದು ದೇವಸ್ಥಾನ ವಿಜಯೋತ್ಸವ ಆಚರಣೆಗೆ ಹೋಮ ಹವನ ಮತ್ತು ಸಾರ್ವಜನಿಕ ಸಮಾರಾಭಾಗಳು ಜರುಗಿದವು . ದಶರಾದ ಸಾಂಪ್ರದಾಯಿಕ ಆಯುಧಪೂಜೆಗಳೂ ಪುನರಾರಂಭಗೊಂಡವು . ಬಸಂತ್ ಪಂಚಮಿಯದಿನ ಸುಹಾಲ್ ದೇವನ ರಾಜ್ಯಾಭಿಷೇಕವೂ ದೊಡ್ಡ ಜಾತ್ರೆ ಆಯೋಜಿಸಿ ವಿಜೃಂಭಣೆಯಿಂದ ಆಚರಿಸುತ್ತಾರೆ .  ೧೯೬೦ ರ ತರುವಾಯ ಸುಹಾಲ್ ದೇವನ ಹೆಸರನ್ನು ರಾಜಕೀಯದಲ್ಲಿ ಬಿಚ್ಚು ಮಾತಿನಲ್ಲಿ ಬಳಸಲಾರಂಭಿಸಿದರು . ಈಗ ಎಲ್ಲಾ ರಾಜಕೀಯ ಪಕ್ಷಗಳೂ ಪಾಸಿ ಪಂಗಡದವರ ಓಟನ್ನು ಗಿಟ್ಟಿಸಲು ಸುಹಲ್ ದೇವನ ಹೆಸರನ್ನೇ ಗಾಳವಾಗಿ ಬಳಸುತ್ತಾರೆ . ಬ ಎಸ್ ಪಿ ಅಧಿಕಾರಕ್ಕೆ ಬಂದ ನಂತರ ದಲಿತರ ಮಹಾನತೆಯನ್ನು ಎತ್ತಿಹಿಡಿಯಲೆಂದು ರಾಜ್ಯದೆಲ್ಲೆಲ್ಲಾ ಸುಹಲ್ ದೇವನ ಪ್ರತಿಮೆ ಸ್ಥಾಪಿಸಿದರು . ಅನೇಕ ನಾಟಕ ಕಂಪನಿಗಳು ಸುಹಾಲ್ ದೇವನ ವೀರ ನಾಟಕಗಳನ್ನು ಪ್ರದರ್ಶಿಸಿ ಅವನ ಕೀರ್ತಿ ಮೆರೆಯುತ್ತಿದ್ದಾರೆ .

ಆದರೂ . . . .  ಬಹುತೇಕ ಭಾರತೀಯರಲ್ಲಿ ಸುಹಲ್ ದೇವನು ಯಾರೆಂದು ಗೊತ್ತಿಲ್ಲದೆ ನಮ್ಮ ಪೂರ್ವಿಕರ ಹಿರಿಮೆಯನ್ನು ಕಡೆಗಣಿಸಿದ್ದೇವೆ . 


ಕೃಪೆ : www.indusresearch.org/raja-suheldev/

No comments:

Post a Comment