ಸೆಪ್ಟಂಬರ್
3 , ಬೆಳಿಗ್ಗೆ
7 ಗಂಟೆ
ನಾಲ್ಕು
ಮಿಸ್ಟೀರ್ಸ್ ಫೈಟರ್ಸ್ ಪಟಾಣ್
ಕೋಟ್ ನಿಂದ ಆಗಸಕ್ಕೆ ಚಿಮ್ಮಿ
15000 ಅಡಿಗಳಷ್ಟು
ಎತ್ತರದಲ್ಲಿ ಅಖ್ನೂರ್ ನತ್ತ
ನೆಗೆದವು . ಅದರ
ಕೆಳಗೆ 300 ಅಡಿಗಳ
ಎತ್ತರದಲ್ಲಿ ಸ್ಕ್ವಾಡ್ರನ್
ಲೀಡರ್ ಜಾನಿ ಗ್ರೀನ್ ರ ನೇತೃತ್ವದಲ್ಲಿ
ನಾಲ್ಕು ಗ್ನಾಟ್ ವಿಮಾನಗಳು ಹೊರಟವು
. ಮತ್ತದರ
ಕೆಳಗೆ 100 ಅಡಿಗಳ
ಎತ್ತರದಲ್ಲಿ ಸ್ಕ್ವಾಡ್ರನ್
ಲೀಡರ್ ಟ್ರೇವರ್ ಕೀಲರ್ ರ
ನೇತೃತ್ವದಲ್ಲಿ ನಾಲ್ಕು ಗ್ನಾಟ್
ವಿಮಾನಗಳು ಹೊರಟವು . ಇದೊಂದು
ವ್ಯವಸ್ತಿತ ಬೀಸಿದ ಬಲೆಯಾಗಿತ್ತು
. ಪಾಕಿಸ್ತಾನೀ
ರೆಡಾರ್ ಮೇಲಿನ ಮಿಸ್ಟೀರ್ ಗಳನ್ನು
ಮಾತ್ರ ಪತ್ತೆ ಹಚ್ಚುತ್ತವೆ.
ಅದರ ಕೆಳಗೆ
ಹಾರುತ್ತಿದ್ದ ಇನ್ನೆರಡು ಗುಂಪಿನ
ಗ್ನಾಟ್ ಗಳು ರೆಡಾರಿನ ಅಂತರಕ್ಕೆ
ಸಿಗುವುದಿಲ್ಲ .
ಯೋಜಿಸಿದಂತೆ
ಪಾಕಿಸ್ತಾನೀ ರೆಡಾರ್ ತಮ್ಮ ಸೇಬರ್
ಮತ್ತು ಸ್ಟಾರ್ ಫೈಟರ್ ಗಳನ್ನು
ಮಿಸ್ಟೀರ್ಸ್ ನತ್ತ ನಿರ್ದೇಶಿಸಿದವು
. ಗ್ನಾಟ್
ಗಳು ಅವರ ಕಣ್ಣಿಗೆ ಬೀಳಲಿಲ್ಲ .
ಅಖ್ನೂರ್
ತಲುಪುವ 30 ಸೆಕೆಂಡ್
ಮುನ್ನ ಮೇಲ್ಭಾಗದಲ್ಲಿ ಹಾರುತ್ತಿದ್ದ
ಮಿಸ್ಟೀರ್ ಗಳು ಕೆಳಗೆ ಡೈವ್ ಮಾಡಿ
ತಮ್ಮ ವಾಯುನೆಲೆಯತ್ತ ವಾಪಸ್ಸಾದವು
. ಅಷ್ಟಲ್ಲದೇ
ಗ್ನಾಟ್ ಗಳು ರಾಕೆಟ್ ಗಳಂತೆ ಕೇವಲ
90 ಸೆಕೆಂಡುಗಳಲ್ಲಿ
30000 ಅಡಿಯಷ್ಟು
ಎತ್ತರಕ್ಕೆ ಚಿಮ್ಮಿ ಆ ಎತ್ತರದ
ಅನುಕೂಲಕರ ಸ್ತರದಲ್ಲಿ ಬರುತ್ತಿದ್ದ
ಸೇಬರ್ ಗಳನ್ನು ಹೊಡೆಯಲು ತಯಾರಾದವು
.
ಕೆಳಗೆ
ಪೇಚೆಗೆ ಸಿಲುಕಿದ ಸೇಬರ್ಸ್ ಗ್ನಾಟ್
ಗಳನ್ನು ಹಿಂಬಾಲಿಸಲು ಪರದಾಡಿದವು
.
ಟ್ರೇವರ್
ಕೀಲರ್ ತಮ್ಮ ಬಲಬದಿಯಲ್ಲಿ ಒಂದು
ಸೇಬರ್ ಗ್ರೀನ್ ರತ್ತ ಬರುತ್ತಿರುವುದನ್ನು
ಕಂಡು ಗ್ರೀನ್ ರಿಗೆ ಒಂದು ವಾರ್ನಿಂಗ್
ಕಾಲ್ ಕೊಟ್ಟರು . ಗ್ರೀನ್
ತಕ್ಷಣ ಡಿಫೆಂಸಿವ್ ಬ್ರೇಕ್
ತಗೆದುಕೊಂಡು ಸೇಬರ್ ನ ಹಿಂದೆ
400 ಗಜಗಳಷ್ಟು
ಅಂತರಕ್ಕೆ ಬಂದು ತಮ್ಮ ಗನ್ ಗಳನ್ನು
ಅದರತ್ತ ಗುರಿಯಿಟ್ಟರು .
ಒಂದಿಷ್ಟು ಗುಂಡುಗಳು
ತಾಗಿದವು . ಮತ್ತೆ
ಗ್ರೀನ್ ತಮ್ಮ ಗ್ನಾಟನ್ನು
ವೇಗೋತ್ಕರ್ಷಿಸಿ ಅದರತ್ತ ಮತ್ತಷ್ಟು
ಸಮೀಪಿಸಿ ಇನ್ನೊಂದಿಷ್ಟು
ಗುಂಡುಗಳನ್ನು ಹೊಡೆದರು .
ಆ ಸೇಬರ್ ನಲ್ಲಿ
ಬೆಂಕಿ ಹೊದ್ದುಕೊಂಡು ಸ್ಪೋಟಗೊಂಡಿತು
.
ಫ್ಲೈಟ್
ಲೆಫ್ಟನೆಂಟ್ ಪಠಾನಿಯಾ ಒಂದು
ಸೇಬರ್ ನನ್ನು ಅಟ್ಟಾಡುತ್ತಿದ್ದರು
ಆದರೆ ಒಂದು ಸ್ಟಾರ್ ಫೈಟರ್
ಮಧ್ಯದಲ್ಲಿ ಬಂದು ಡೈವ್ ಹೊಡೆದ
ಕಾರಣ ಗುರಿ ತಪ್ಪಿತು .
ಅಷ್ಟರಲ್ಲಿ
ಗ್ನಾಟ್ ಗಳು ತಮ್ಮ ಕ್ಷಮತೆ ಮೀರಿ
ಹಾರಾಟ ಮಾಡಿದ್ದರಿಂದ ತಮ್ಮ ಇಂಧನ
ತೀರುವುದರಲ್ಲಿತ್ತು .
ಇನ್ನಷ್ಟು ಹಾರಾಡಲು
ಸಾಧ್ಯವಿಲ್ಲದ ಕಾರಣ ತಮ್ಮ
ವಾಯುನೆಲೆಗೆ ವಾಪಸ್ಸಾದವು .
ಸೆಪ್ಟೆಂಬರ್
4
ಮಿಸ್ಟೀರ್
ಫೈಟರ್ಸ್ ಚಂಬ್ – ಜೌರಿಯಾ ಸೆಕ್ಟರ್
ನಲ್ಲಿ ಪಾಕಿ ಸೇನೆಯ ಮೇಲೆ ಬಲವಾದ
ಧಾಳಿ ಮಾಡುತ್ತಿದ್ದವು .
ಅದಕ್ಕೆ ಟಾಪ್ ಕವರ್
ನಂತೆ ಗ್ನಾಟ್ ಪೈಟರ್ಸ್ ಗಳಿದ್ದವು
. ನಮ್ಮ ಭೂಸೇನೆಯ
ಮೇಲೆ ಧಾಳಿ ಮಾಡಲು ಸೇಬರ್ ಗಳು
ಬಂದವು . ಅವುಗಳನ್ನು
ಸದೆಬಡಿಯಲು ನಮ್ಮ್ ಗ್ನಾಟ್ ಗಳು
ಮತ್ತೆ ನೆಗೆದವು . ಸೇಬರ್
ಗಳು ತಪ್ಪಿಸಿಕೊಳ್ಳಲು ತಡಕಾಡಿದವು
.
ಪ್ಲೈಟ್
ಲೆಫ್ಟನೆಂಟ್ ಪಠಾನಿಯಾ ಒಂದು
ಸೇಬರ್ ಅಖ್ನೂರ್ ಸೇತುವೆಯತ್ತ
ಹೊರಟಿದ್ದ ಕಂಡು ಅದರತ್ತ ಚಲಾಯಿಸಿದರು
. ಪಠಾನಿಯಾ
ಬಲು ಚಾಕುಚಕ್ಯತೆಯಿಂದ ಅದನ್ನು
ಹೊಡೆದರು . ಇದು
ಗ್ನಾಟಿನ ಎರಡನೇ ಸೇಬರ್ ಬೇಟೆಯಾಗಿತ್ತು
.
ಟ್ರೇವರ್
ಕೀಲರ್ ಸೇಬರ್ ನನ್ನು ಹೊಡೆದ ಮೊದಲ
ಪೈಲಟ್ ಆದರು . ಆ
ಪರಾಕ್ರಮಕ್ಕೆ ವೀರ ಚಕ್ರ ಪ್ರದಾನವಾಯಿತು
. ಫ್ಲೈಟ್
ಲೆಫ್ಟನೆಂಟ್ ಪಠಾನಿಯಾರವರಿಗೂ
ಕೂಡ ವೀರ ಚಕ್ರ ಲಭಿಸಿತು .
ಅಲ್ಲಿಯ
ತನಕ ಸೊಕ್ಕಿನಿಂದ ಮೆರೆಯುತ್ತಿದ್ದ
ಪಾಕಿಸ್ತಾನೀ ಸೇಬರ್ ಗಳ ರೆಕ್ಕೆಗಳಿಗೆ
ಒಂದು ತಣ್ಣನೆಯ ಚಳಿ ಜ್ಕರ
ಹಚ್ಚಿದಂತಾಯ್ತು .
No comments:
Post a Comment