Friday 20 January 2017

ಸಾಮನಾದ ಸಂಹಾರ : ಭಾಗ ೨


೧೭೦೯ ನವೆಂಬರ್ ೨೬ ರ ರಾತ್ರಿ

ಒಂದು ಬೃಹತ್ ಸೇನೆಯೊಂದಿಗೆ ಬಂದಾ ಬಹಾದ್ದೂರ್ ಅತಿ ವೇಗದಲ್ಲಿ ನಗರದ ದ್ವಾರ ಪ್ರವೇಶಿಸಿದ . ನಗರದ ದ್ವಾರ ಪಾಲಕರನ್ನು ತಲುಪುತ್ತಿದ್ದಂತೆಯೇ ಅವರನ್ನು ಬರ್ಬರವಾಗಿ ಹತ್ಯೆಗೈದು ನಗರ ಪ್ರವೇಶಿಸಿದರು . ಈ ಹಠಾತ್ತನೆ ನಡೆದ ಆಕ್ರಮಣಕ್ಕೆ ಕೇವಲ ತಮ್ಮ ರಕ್ಷಣೆಯನ್ನು ಮಾತ್ರ ಮಾಡಿಕೊಳ್ಳುತ್ತ ಮೈಮರೆತಿದ್ದ ಅಮೀರರು ಮತ್ತು ಫೌಜುದಾರರು ಒಮ್ಮೆಲೇ ಭಯಭೇತರಾದರು . ಅವರ ಬಹುತೇಕ ಪಡೆಯನ್ನು ತಮ್ಮ ಖಾಸಗಿ ರಕ್ಷಣೆಗಾಗಿ ಮಾತ್ರ ಬಳಸುತ್ತಿದ್ದರು . ಹಾಗಾಗಿ ಅವರ ಸೇನೆ ಇಪ್ಪತ್ತೆರಡು ವಿಭಾಗಗಳಲ್ಲಿ ಎಲ್ಲೆಡೆ ಚದುರಿ ಪರಿಣಾಮಕಾರಿ ರಕ್ಷಣೆಗೆ ನಾಲಾಯಕ್ ಆಗಿದ್ದವು . ಒಟ್ಟಿನಲ್ಲಿ ಎಲ್ಲಾ ಬಂದಾನ ಅನುಕೂಲಕ್ಕೇ ನಡೆಯುತ್ತಿತ್ತು . ಅಮೀರರ ಅಭೇದ್ಯ ಕೋಟೆಗಳನ್ನು ಪ್ರವೇಶದ್ವಾರಗಳಲ್ಲಿ ಮುತ್ತಿಗೆ ಹಾಕಿ ಬಂದಿಖಾನೆಗಳಾದವು . ಸಮರಕ್ಕೆ ತಕ್ಕಂತೆ ಅವರ ಸೇನೆಯನ್ನು ಚಲಿಸಲೂ ಅಸಾಧ್ಯವಾಯಿತು . ಫತ್ತೇ ಸಿಂಗನ ಯೋಜನೆ ಸಮರ್ಥವಾಗಿ ನೆರವೇರಿತು .ಶತ್ರುಗಳ ಕೈಕಟ್ಟಿತು .  ಒಮ್ಮೆ ಕೊನೇ ಬಾರಿ  ಫತ್ತೇ ಸಿಂಗ್ ಎಲ್ಲ ಹವೇಲಿಗಳು ಬಂದಿಯಾಗಿದೆಯೋ ಇಲ್ಲವೋ ಎಂದು ಗಸ್ತು ತಿರುಗಿ ಪಕ್ಕ ಮಾಡಿಕೊಂಡ . ಇನ್ನು ಅಂತಿಮ ಪ್ರಹಾರ ಕೊಡುವುದೊಂದೇ ಬಾಕಿ .

ನಂತರ ಮಿಕ್ಕ ಎಲ್ಲ ಪಡೆಗಳು ಬಂದಾ ನೇತೃತ್ವದಲ್ಲಿ ಜಲಾಲುದ್ದೀನನ ಹವೇಲಿಯ ಮೇಲೆ ಲಗ್ಗೆ ಇಟ್ಟವು . ಆ ಹವೇಲಿಯ ಮೇಲ್ಛಾವಣೆಯಿಂದ ಗುಂಡಿನ ಧಾಳಿ ಮಾಡಿದರು . ಇದರಿಂದ ಸ್ವಲ್ಪ ಘಾಸಿಯುಂಟಾಯಿತು . ಈ ಗದ್ದಲದ ಮಧ್ಯ ಒಬ್ಬ ಬಂದಾನ ಸೈನಿಕ ಗುಂಡು ತಲುಪದ ಮರೆಯಲ್ಲಿ ಒಂದು ಗೋಡೆ ಸಮೀಪದ ಬಳಸುಹಾದಿಯನ್ನು ಗಮನಿಸಿದ . ಅಲ್ಲಿ ತನ್ನ ಸಂಗಡಿಗರೊಂದಿಗೆ ಬ್ಯಾಟರಿಂಗ್ ರಾಮ್ ನನ್ನು ನುಗ್ಗಿಸಿ ಗೋಡೆ ಒಡೆದರು . ನಿರೀಕ್ಷಿತ ಸಮಯಕ್ಕಿಂತ ತುಸು ಬೇಗನೇ ಈ ಕೆಲಸ ಮುಗಿಯಿತು . ಹವೇಲಿಯ ಒಳಗೆ ಪ್ರವೇಶ ಸಿಕ್ಕಿತು .
ಅದರ ನಂತರ ಸಿಖ್ ಸೈನಿಕರಲ್ಲದೇ ಇತರ ರೈತರು ಉಳಿದೆಲ್ಲ ನಾಗರಿಕರೂ ಪ್ರವಾಹದಂತೆ ಒಳನುಗ್ಗಿದರು . ಹವೇಲಿಯ ಒಳಗಿದ್ದವರನ್ನು ಯಾವ ವಯಸ್ಸು ಲಿಂಗ ಭೇದವಿಲ್ಲದೇ ಕತ್ತಿಗೆ ಬಲಿಕೊಡಲಾಯಿತು . ಅದೆಷ್ಟೋ ವರ್ಷಗಳ ದಬ್ಬಾಳಿಕೆ ಸಾವು ನೋವಿನ ಸೇಡನ್ನು ಈಗ ತೀರಿಸಿಕೊಂಡರು . ಯಾವ ಮಟ್ಟಕ್ಕೆ ಇದು ವಿಪರೀತವಾಯ್ತೆಂದರೆ ಈ ವಿಷ ಪರಂಪರೆಯ ಮನೆಯ ಕೊನೆ ಸದಸ್ಯನೂ ಹತ್ಯೆಯಾಗುವತನಕ ಅಲ್ಲಿನ ಜನ ನೆತ್ತರು ಹರಿಸಿದರು . 
ಬಂದಾನು ಜನರ ಕ್ರೋಧಕ್ಕೆ ಹವೇಲಿಯನ್ನು ಬಿಟ್ಟು ಹೊರಬಂದ . ಒಂದಾದರೊಂದಂತೆ ಎಲ್ಲ ಹವೇಲಿಗಳು ಕುಸಿದವು ಮತ್ತು ಒಳಗಿದ್ದ ಎಲ್ಲರೂ ಬಲಿಯಾಗತೊಡಗಿದರು .

ಸೂರ್ಯಾಸ್ತವಾಗುವವೊಳಗೆ ಸಾಮನಾದ ಸಮರ ಮುಗಿಯಿತು . ಒಮ್ಮೆ ಸಂಪತ್ಭರಿತವಾಗಿದ್ದ ನಗರ ಈಗ ಪಾಳು ಬಿದ್ದಿದೆ . ಬೀದಿ ಬೀದಿಯಲ್ಲೂ ರಕ್ತದ ಹೊಳೆ ಹರಿಯುತ್ತಿದೆ.  ಸುಮಾರು ೧೦ ಸಾವಿರಕ್ಕಿಂತ ಅಧಿಕ ಜನ ಒಂದೇ ದಿನದಲ್ಲಿ ಸತ್ತರು .
ಜಲಾಲುದ್ದೀನ್ ತನ್ನ ಹವೇಲಿಯಿಂದ ತಪ್ಪಿಸಿಕೊಳ್ಳಲು ಮೆಲ್ಲನೆ ಹೊರ ನಡೆಯುತ್ತಿದ್ದ . ಫತ್ತೇ ಸಿಂಗ್ ಅವನನ್ನು ಹಿಡಿದು ಒಂದೇ ಏಟಿನಿಂದ ಅವನ ರುಂಡ ಹಾರಿಸಿದ . ತೇಗ ಬಹಾದ್ದೂರರನ್ನು ಕೊಂದ ಈ ಪಾತಕಿಯ ತಲೆಯನ್ನು ಈಟಿಯ ಮೇಲೆ ಚುಚ್ಚಿ ನಗರ ಒಂದು ಪ್ರವೇಶ ದ್ವಾರದಲ್ಲಿ ನೆಟ್ಟರು .  ಷಾಶಾಲ್ ಬೇಗ್ ಮತ್ತು ಭಾಷಲ್ ಬೇಗರಿಗೂ ಇದೇ ರೀತಿ ಗತಿ ಕಾಣಿಸಿದರು .

ಸಂಜೆಯ ಹೊತ್ತಿನಲ್ಲಿ ಧಗಧಗನೆ ಉರಿಯುತ್ತಿದ್ದ ನಗರ ಚಳಿಗೆ ಒಳ್ಳೆ ಬಿಸಿ ಮುಟ್ಟಿಸುತ್ತಿತ್ತು . ಮಟ್ಟುಳಿದ ಕಲ್ಮಶಗಳನ್ನು ಅಗ್ನಿ ಸುಡುತ್ತಾ ವಾಯುಮಂಡಲದಲ್ಲಿ ಒಂದು ತೀಕ್ಷ್ಣ ದುರ್ಗಂಧ ಸೂಸುತ್ತಿತ್ತು .

ಜಲಾಲುದ್ದೀನನ ಆಸ್ಥಾನವಾಗಿದ್ದ ಕೋಣೆಯಲ್ಲಿ ಬಂದಾನು ಬಿಡಾರ ಹೂಡಿದ್ದ . ಬಂದಾನು ಶಾಂತನಾಗಿ ಚಿಂತಾಮಗ್ನನಾಗಿ ಕುಳಿತಿದ್ದ . ಅವನನ್ನು ಸಮಾಧಾನಿಸಲೆಂದು ಭುಜದ ಮೇಲೆ ಭಾಯಿ ಬಿನೋದ್ ಕೈ ಇಟ್ಟ ಮತ್ತು ಬಳಿ ಕುಳಿತ . ಬಂದಾನಲ್ಲಿ ಒಂದು ಸಣ್ಣ ದುಃಖದ ನಗೆ ಬಂತು . “ ಬಾ ಭಾಯಿ , ಇವತ್ತಿನ ದಿನ ತುಂಬಾ ಶ್ರಮದಾಯಕವಾಗಿತ್ತು . ಸ್ವಲ್ಪ ವಿಶ್ರಾಂತಿ ತೆಗೆದುಕೋ  ”. ಬಂದಾನು ಆಲೋಚನೆ ಮಾಡುತ್ತಾ – “ ಗುರುಗಳ ಆಜ್ಞೆ ಯಾಗಿದ್ದು ಉದಾತ್ತ ಗುಣದಿಂದ ವಿಜಯ ಸಾಧಿಸಬೇಕೆಂದು ಅದಕ್ಕಾಗಿ ಈ ರಕ್ತಪಾತವಿಲ್ಲದೇ ಬೇರೆ ಯಾವ ಮಾರ್ಗವಿರುತ್ತಿತ್ತೋ . . .  ”. ಬಂದಾನ ಮಾತಿನ ಸ್ವರದಲ್ಲಿ ಸಾಮನಾದ ವಿಜಯ ನಗಣ್ಯದಂತೆ ತೋರಿತು . ಬಿನೋದನು ನುಡಿದ – “ ನಮಗೂ ಕೂಡ ರಕ್ತಪಾತವಿಲ್ಲದೆಯೇ ಸಾಧಿಸಬೇಕೆಂದಿತ್ತು , ಆದರೆ ಬೇರೆ ದಾರಿಯಿಲ್ಲ . ಇಲ್ಲಿನ ಜನ ಶತಮಾನಗಳ ಸಾವು ನೋವನ್ನು ಅನುಭವಿಸಿದ್ದಾರೆ ಅದರ ಕ್ರೋಧವು ಇವರನ್ನು ಕಾನೂನನ್ನು ಕೈಗೆ ತೆಗೆದುಕೊಳ್ಳುವಂತೆ ಮಾಡಿದೆ . ಈ ಮೋಘಲರು ತಾವು ಮಾಡಿದ್ದನ್ನೇ ಅನುಭವಿಸಿದರಷ್ಟೇ . ಅದಕ್ಕಾಗಿ ನಾವು ಜನರನ್ನು ದೂಷಿಸಲಾಗುವುದಿಲ್ಲ . ” . ಬಂದಾನಿಗೆ ಸಮಾಧಾನಕರವೆನಿಸಲಿಲ್ಲ – “ ಆದರೂ ಈ ರೀತಿ ಸಂಪೂರ್ಣ ಸೇಡು ತೀರಿಸಿಕೊಳ್ಳುವ ಅವಶ್ಯಕತೆಯಿರಲಿಲ್ಲ . ನಾವು ನಮ್ಮ ಜನಕ್ಕೆ ಶತ್ರುಗಳನ್ನು ಕ್ಷಮಿಸುವಂತಹ ಗುರುಗಳ ಸಂದೇಶ ತಿಳಿಸಬಹುದಿತ್ತು  ”. ಆಗ ಬಿನೋದ – “ ಯಾವ ನೈತಿಕ ಭೋದನೆಯು ಶೋಷಿತ ಮನಸ್ಸಿಗೆ ಸಾಂತ್ವನ ನೀಡಲು ಸಾಧ್ಯ ? ಗುರುಗಳ ಉಪದೇಶ ಏನೂ ವ್ಯತ್ಯಾಸ ತರದು . ಹಾಗೇನಾದರೂ ಇವರಿಗೆ ಆ ಹೊತ್ತಿನಲ್ಲಿ ನಾವು ಬೋಧನೆ ಮಾಡಿದರೆ ಅವರ ಆಕ್ರೋಶ ನಮ್ಮ ವಿರುದ್ಧವೇ ತಿರುಗಿ ಬಿದ್ದೀತು . ಭಾಯಿ ಬಂದಾ ಸುಮ್ಮನೆ ಭಾವನೆಗಳಿಗೆ ಮರುಳಾಗಿ ದಣಿಯಬೇಡ . ನಿನಗೆ ತಿಳಿದಂತೆ ಪ್ರಪಂಚವು ದೈವೇಚ್ಛೆಯಂತೆ ನಡೆಯುತ್ತದೆ . ಆ ಅಮೀರರಿಗೆ ತಮ್ಮ ಪಾಪದ ಫಲವೇ ಲಭಿಸಿದೆ . ಅವರ ಪಾಪಕ್ಕಿಂತ ಜನರ ತಪ್ಪೇನೂ ದೊಡ್ಡದಲ್ಲ . ಇದಕ್ಕೆ ನೀನು ಕಾರಣವೆಂದು ಭಾವಿಸಬೇಡ  ”.

ಸಾಮನಾದ ಸಮರದಲ್ಲಿ ಬಂದಾನ ಸೈನಿಕರು ಅಪಾರ ಸಂಪತ್ತನ್ನು ಕೊಳ್ಳೆಹೊಡೆದರು . ಅದರಲ್ಲಿ ಒಂದು ದೊಡ್ಡ ಮೊತ್ತ ಮುಂದಿನ ಸಂಗ್ರಾಮಕ್ಕೆ ತೆಗೆದಿಟ್ಟು ಉಳಿದನ್ನು ಅವರವರ ಮಧ್ಯೆ ಸಮಾನವಾಗಿ ಹಂಚಿಕೊಂಡರು .
ಸಾಮನಾದ ಸಮರ ಬಂದಾ ಬಹಾದ್ದೂರನ ಚೊಚ್ಚಲ ಜಯ . ಹದಿನೆಂಟನೇ ಶತಮಾನದ ಆದಿಯಲ್ಲಿ ಅವಸಾನದ ಹಾದಿಯಲ್ಲಿದ್ದ ಮೊಘಲ್ ಸಾಮ್ರಾಜ್ಯಕ್ಕೆ ಉತ್ತರದಲ್ಲಿ ಬಂದಾ ಮೊದಲ ಕೊಡಲಿ ಪೆಟ್ಟು ಕೊಟ್ಟ . ಇನ್ನೂ ಮುಂದಿನ ವಿಜಯಯಾತ್ರೆಯಿಂದ ಪಂಜಾಬನ್ನು ಮುಕ್ತಗೊಳಿಸಿ ಸಿಖ್ ಸಾಮ್ರಾಜ್ಯವನ್ನೂ ಕಟ್ಟಿದ .


ಸಂಭವಾಮಿ ಯುಗೇ ಯುಗೇ ಎಂಬ ಗೀತೆಯ ವಾಣಿಯನ್ನು ಪುನಃ ನಿರೂಪಿಸಿದ ಬಂದಾ .

No comments:

Post a Comment